'KCET' ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ! ಫೆಬ್ರವರಿ 20 ರವರೆಗೆ ಗಡುವು

ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) 2024ನೇ ಸಾಲಿನ ಸಾಮಾನ್ಯ ಪ್ರವೇಶ ಪರೀಕ್ಷೆ (ಕೆಸಿಇಟಿ) ನೋಂದಣಿ ದಿನಾಂಕವನ್ನು ವಿಸ್ತರಣೆ ಮಾಡಿ ಆದೇಶವನ್ನು ಹೊರಡಿಸಿದೆ.
ಇದೇ ವೇಳೆ ಆದೇಶದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ Karnataka Examinations Authority ಸಂಖ್ಯೆ: ಇಡಿ/ಕೆಇಎ/ಪತ್ರಿಕಾ ಪ್ರಕಟಣೆ/2024 KKEA ದಿನಾಂಕ: 31-01-2024 ಸಿಇಟಿ-2024ಕ್ಕೆ ನೊಂದಣಿ ಹಾಗು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಆನ್‌ಲೈನ್ ಅರ್ಜಿ ಸಲ್ಲಿಸದೆ ಇರುವ ಹಾಗು ಶುಲ್ಕವನ್ನು ಪಾವತಿಸದೆ ಇರುವ ಅಭ್ಯರ್ಥಿಗಳ ಅನುಕೂಲಕ್ಕಾಗಿ ದಿನಾಂಕ 18-04-2024 ಮತ್ತು 19-04-2024 ರಂದು ನಡೆಸಲಾಗುವ ಸಿಇಟಿ-2024ಕ್ಕೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು 20-02-2024 ರ ರಾತ್ರಿ 11.59 ರವರೆಗೆ ಹಾಗು 23-02-2024 ರ ಸಂಜೆ 5.30 ರವರೆಗೆ ಶುಲ್ಕ ಪಾವತಿಸಲು ದಿನಾಂಕವನ್ನು ವಿಸ್ತರಿಸಲಾಗಿರುತ್ತದೆ ಎಂದು ತಿಳಿಸಿದೆ.
ಕೆಇಎಯಲ್ಲಿ ನೋಂದಾಯಿಸಿಕೊಳ್ಳದ ಅಭ್ಯರ್ಥಿಗಳು ದಿನಾಂಕ 20-02-2024 ರಂದು ರಾತ್ರಿ 11.59 ರವರೆಗೆ ಆನ್ ಲೈನ್ ನಲ್ಲಿ ನೋಂದಾಯಿಸಿಕೊಳ್ಳಬಹುದು ಮತ್ತು ಸಿಇಟಿ-2024 ಗಾಗಿ 23-02-2024 ರ ಸಂಜೆ 5.30 ರವರೆಗೆ ಶುಲ್ಕವನ್ನು ಪಾವತಿಸಬಹುದು. ವಿದ್ಯಾರ್ಥಿ ಸಮುದಾಯದ ಕಲ್ಯಾಣಕ್ಕಾಗಿ, 18-04-2024 ಮತ್ತು 19-04-2024 ರಂದು ನಿಗದಿಯಾಗಿರುವ ಸಿಇಟಿ-2024 ರ ದಿನಾಂಕಗಳನ್ನು ವಿಸ್ತರಿಸಲಾಗಿದೆ" ಎಂದು ಅಧಿಕೃತ ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ.