ಹುಬ್ಬಳ್ಳಿ: ಸಿದ್ಧಾರೂಢರ ಜಾತ್ರೆಯಲ್ಲಿ ಹಣ್ಣು ಹಾಲು ವಿತರಣೆ: ಸಾರ್ವಜನಿಕರ ದಾಹ ತೀರಿಸಿದ ಭಕ್ತರು

ಹುಬ್ಬಳ್ಳಿ: ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಸದ್ಗುರು ಸಿದ್ಧಾರೂಢರ ಜಾತ್ರೆ ಅಂದರೆ ಎಲ್ಲರಿಗೂ ಒಂದಿಲ್ಲೊಂದು ರೀತಿಯಲ್ಲಿ ಭಕ್ತಿಯ ಭಾವ ಮೂಡುತ್ತದೆ. ಅದರಂತೆ ಅದೆಷ್ಟೋ ಆಟೋ ಚಾಲಕರು ಜಾತ್ರೆಗೆ ಉಚಿತ ವಾಹನ ಸೇವೆ ಮಾಡಿದರೇ ಇನ್ನೂ ಕೆಲವರು ಹಣ್ಣು ಹಂಪಲು, ಹಾಲು ವಿತರಣೆ ಮಾಡುವ ಮೂಲಕ ಸಿದ್ಧಾರೂಢರ ಭಕ್ತಿಗೆ ಪಾತ್ರರಾದರು. ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿ ಶ್ರೀ ಸದ್ಗುರು ಸಿದ್ಧಾರೂಢರ ಭಕ್ತರು ಸ್ವಯಂ ಪ್ರೇರಣೆಯಿಂದ ಹುಬ್ಬಳ್ಳಿಗೆ ಆಗಮಿಸುವ ಜನರಿಗೆ ಹಣ್ಣು, ಹಾಲು ವಿತರಣೆ ಮಾಡುವ ಮೂಲಕ ಸೇವೆಯನ್ನು ಮಾಡುತ್ತಿದ್ದಾರೆ. ಬಿಸಿಲಿನ ಬೇಗೆಯಲ್ಲಿ ಬಂದಿರುವ ಜನರು ಸದ್ಗುರು ಸಿದ್ಧಾರೂಢರನ್ನು ಸ್ಮರಿಸಿ ಭಕ್ತಿ ಸೇವೆ ಸಲ್ಲಿಸುತ್ತಿರುವ ಭಕ್ತರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ವೆಂಕಟೇಶ, ಮಹೇಶ, ಸಮೀರ್, ವಿಕ್ರಂ, ರಾಘವೇಂದ್ರ ಮನೋಜ ಸೇರಿದಂತೆ ಇತರರು ಉಪಸ್ಥಿತರಿದ್ದರು.