ಬೆಳಗಾವಿ : ಸಾಂಬ್ರಾ ವಿಮಾನ‌ ನಿಲ್ದಾಣಕ್ಕೆ ಆಗಮಿಸಿದ ಮೋದಿ

ಬೆಳಗಾವಿ : ಸಾಂಬ್ರಾ ವಿಮಾನ‌ ನಿಲ್ದಾಣಕ್ಕೆ ಆಗಮಿಸಿದ ಮೋದಿ

ಬೆಳಗಾವಿ : ನಾಳೆ ಜಗದೀಶ್ ಶೆಟ್ಟರ್ ಪರ ಬೃಹತ್ ಪ್ರಚಾರಕ್ಕಾಗಿ ಪ್ರಧಾನಿ ಮೋದಿ ಕುಂದಾನಗರಿಗೆ ಆಗಮಿಸಿದ್ದಾರೆ. ಇಂದು ರಾತ್ರಿ ಆಗಮಿಸಿದ ಮಾನ್ಯ ಪ್ರಧಾನಮಂತ್ರಿ ಅವರನ್ನು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ‌ ಅಭ್ಯರ್ಥಿ ಜಗದೀಶ್ ಶೆಟ್ಟರ್ ಬರಮಾಡಿಕೊಂಡರು. 

ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸ್ವಾಗತ ಕೋರಲಾಯಿತು. ನಾಳೆ ಜಗದೀಶ್ ಶೆಟ್ಟರ್ ಪರ ಪ್ರಚಾರ ಸಭೆಯಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಇವತ್ತು ಬೆಳಗಾವಿಯ ವೆಲಕಮ್ ಹೊಟೇಲ್ ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.