ಫೆ.12ರಿಂದ ವಿಧಾನಸಭೆ ಬಜೆಟ್ ಅಧಿವೇಶನ, 16ಕ್ಕೆ ಬಜೆಟ್ ಮಂಡನೆ : ಯು.ಟಿ.ಖಾದರ್

ರಾಯಚೂರು: ‘ಫೆಬ್ರುವರಿ 12ರಿಂದ 23ರವರೆಗೆ ವಿಧಾನಸಭೆ ಬಜೆಟ್ ಅಧಿವೇಶನ ನಡೆಯಲಿದೆ. ಮೊದಲ ದಿನ ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದು, ಫೆ.15 ರವರೆಗೆ ರಾಜ್ಯಪಾಲರ ಭಾಷಣ ಮೇಲೆ ಚರ್ಚೆ ನಡೆಯಲಿದೆ. ಫೆ.16ಕ್ಕೆ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡನೆ ಮಾಡಲಿದ್ದಾರೆ‘ ಎಂದು ವಿಧಾನಸಭೆ ಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದರು.
ಬಜೆಟ್ ಕುರಿತು ಮಾಹಿತಿ ಒದಗಿಸಲು ಎಲ್ಲ ಶಾಸಕರಿಗೆ ಫೆ.9ರಂದು ಬೆಂಗಳೂರಿನ ಹೋಟೆಲ್ ಕ್ಯಾಪಿಟಲ್‌ನಲ್ಲಿ ಒಂದು ದಿನದ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಹೇಳಿದರು.
‘ವಾಸ್ತವದಲ್ಲಿ ಬಜೆಟ್ ಹೇಗೆ ರೂಪಿಸಲಾಗುತ್ತದೆ, ಯಾವ ಯಾವ ಇಲಾಖೆಗೆ ಹೇಗೆ ಅನುದಾನ ಮೀಸಲಿಡಲಾಗುತ್ತದೆ. ಇಲಾಖೆಗಳ ಕಾರ್ಯನಿರ್ವಹಣೆ ಹೇಗಿರುತ್ತದೆ ಎನ್ನುವುದರ ಕುರಿತಾಗಿ ಶಾಸಕರಿಗೆ ಮಾಹಿತಿ ಒದಗಿಸಲಾಗುವುದು. ಇದರ ಜೊತೆಗೆ ಪತ್ರಕರ್ತರಿಗೂ ಸಹ ಪ್ರತ್ಯೇಕವಾಗಿ ತರಬೇತಿ ಕಾರ್ಯಾಗಾರ ನಡೆಸಲಾಗುವುದು’ ಎಂದು ತಿಳಿಸಿದರು
.