ವನ್ಯಜೀವಿಗಳ ರಕ್ಷಣೆ ಪುನರ್ವಸತಿ ನಮ್ಮ ಗುರಿ - ಅನಂತ್ ಅಂಬಾನಿ

ಮುಂಬೈ: ರಿಲಯನ್ಸ್ ಸಹಯೋಗದ ವಂತರಾ ಸಂಸ್ಥೆಯ ನೇತೃತ್ವದಲ್ಲಿ ವನ್ಯಜೀವಿಗಳ ಸಮಗ್ರ ರಕ್ಷಣೆ, ಮತ್ತು ಪುನರ್ವಸತಿ ಯೋಜನೆಯೊಂದನ್ನು ರೂಪಿಸಲಾಗಿದೆ. ಇದು ಭಾರತದಲ್ಲೇ ಮೊಟ್ಟ ಮೊದಲ ಯೋಜನೆಯಾಗಿದೆ ಎಂದು ವಂತರಾ ಸಂಸ್ಥೆಯ ನಿರ್ದೇಶಕ ಅನಂತ್ ಅಂಬಾನಿ ಹೇಳಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸಮಯದಲ್ಲಿ ನಾವು ವನ್ಯಜೀವಿ ರಕ್ಷಣಾ ಕೇಂದ್ರವನ್ನು ಆರಂಭಿಸಿದ್ದೇವೆ. ಆನೆ ಹಾಗೂ ಇತರ ವನ್ಯಜೀವಿಗಳ ರಕ್ಷಣೆಗಾಗಿ 600 ಎಕರೆ ಜಾಗದಲ್ಲಿ ಅರಣ್ಯ ಬೆಳೆಸಿದ್ದೇವೆ. ಇದರಲ್ಲಿ ಆನೆಗಳಿಗೆ ಸಂಪೂರ್ಣ ಆವಾಸ ಸ್ಥಾನ ನಿರ್ಮಿಸಿದ್ದೇವೆ. ವನ್ಯಜೀವಿ ಸಂಶೋಧನೆ ಹಾಗೂ ಸಂರಕ್ಷಣೆಗಾಗಿ ಸುಮಾರು ಮೂರು ಸಾವಿರ ಜನ ಕೆಲಸ ಮಾಡುತ್ತಿದ್ದೇವೆ. ವನ್ಯಜೀವಿಗಳ ಬಗ್ಗೆ ಹೆಚ್ಚು ಅಧ್ಯಯನ ಮಾಡಿರುವ ಪದವೀಧರರು ಹಾಗೂ ಪಶುವೈದ್ಯರ ತಂಡ ಕೂಡ ಇದರಲ್ಲಿ ಕೆಲಸ ಮಾಡುತ್ತಿದೆ ಎಂದು ಅನಂತ್ ಅಂಬಾನಿ ಹೇಳಿದ್ದಾರೆ.