ಮಾಧ್ಯಮ ಲೋಕಕ್ಕೂ ಕಾಲಿಟ್ಟ ಶ್ರೀಮಂತ ಉದ್ಯಮಿ ಗೌತಮ್ ಅದಾನಿ !

ಮಾಧ್ಯಮ ಲೋಕಕ್ಕೂ ಕಾಲಿಟ್ಟ ಶ್ರೀಮಂತ ಉದ್ಯಮಿ ಗೌತಮ್ ಅದಾನಿ !

ನವದೆಹಲಿ: ವಿಶ್ವದ ನಾಲ್ಕನೆಯ ಶ್ರೀಮಂತ ಗೌತಮ್ ಅದಾನಿ ಅವರು ಮಾಧ್ಯಮ ಲೋಕಕ್ಕೂ ಕಾಲಿಟ್ಟಿದ್ದಾರೆ. ಇವರ ಸಂಸ್ಥೆಯಿಂದಲೇ ಈಗ ಎಎಂಜಿ ಮೀಡಿಯಾ ನೆಟ್‌ವರ್ಕ್ ಹೆಸರಿನಲ್ಲಿಯೇ ಮಾಧ್ಯಮ ಕಂಪನಿಯೊಂದು ಆರಂಭಗೊಂಡಿದೆ. 

ಗೌತಮ್ ಅದಾನಿ ಅವರ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಈ ಬಗ್ಗೆ ಮುಂಬೈ ಷೇರುಪೇಟೆಗೆ ಮಾಹಿತಿಯನ್ನ ಈಗ ಕೊಟ್ಟಿದೆ. 

ಎಎಂಜಿ ಮೀಡಿಯಾ ನೆಟ್‌ವರ್ಕ್ ಅದಾನಿ ಎಂಟರ್‌ಪ್ರೈಸಸ್ ಲಿಮಿಟೆಡ್ ಅಂಗಸಂಸ್ಥೆ ಆಗಿದ್ದು,ಮುಂದಿನ ದಿನಗಳಲ್ಲಿ ಕಾರ್ಯಾಚರಣೆ ಆರಂಭಿಸಲಿದೆ. ಈ ಸಂಸ್ಥೆ ಮೂಲಕ ಪ್ರಕಾಶನ,ಜಾಹೀರಾತು,ಪ್ರಸಾರ,ವಿತರಣೆ ಹೀಗೆ ಮಾಧ್ಯಮಕ್ಕೆ ಸಂಬಂಧಿಸಿದ ಕೆಲಸಗಳನ್ನೆ ಇದು ಮಾಡಲಿದೆ ಎಂದು ಅದಾನಿ ಎಂಟರ್‌ಪ್ರೈಸಸ್ ಹೇಳಿದೆ.