ಜಿಎಸ್‌ಟಿ ವ್ಯಾಪ್ತಿಗಿಲ್ಲ ಪೆಟ್ರೋಲ್‌, ಡೀಸೆಲ್: ನಿರ್ಮಲಾ ಸೀತಾರಾಮನ್

ಜಿಎಸ್‌ಟಿ ವ್ಯಾಪ್ತಿಗಿಲ್ಲ ಪೆಟ್ರೋಲ್‌, ಡೀಸೆಲ್: ನಿರ್ಮಲಾ ಸೀತಾರಾಮನ್

ಪೆಟ್ರೋಲ್‌ ಮತ್ತು ಡೀಸೆಲ್ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ಸೇರಿಸಲು ಸದ್ಯಕ್ಕೆ ಸಾಧ್ಯವಾಗುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 

 

ಉತ್ತರ ಪ್ರದೇಶ ರಾಜಧಾನಿ ಲಕ್ನೋದಲ್ಲಿ ಇಂದು 45ನೇ ಜಿಎಸ್‌ಟಿ ಮಂಡಳಿ ಸಭೆ ನಡೆದಿದ್ದು, ಅಲ್ಲಿ ತೆಗೆದುಕೊಳ್ಳಲಾಗಿದೆ ನಿರ್ಧಾರಗಳ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡುತ್ತಿದ್ದಾರೆ. 

 

* ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‍ಟಿ(GST) ವ್ಯಾಪ್ತಿಗೆ ತರಲು ಕರ್ನಾಟಕ ಸೇರಿ ಎಲ್ಲಾ ರಾಜ್ಯಗಳು ಒಕ್ಕೊರಲಿನಿಂದ ತೀವ್ರವಾಗಿ ವಿರೋಧಿಸಿದ ಕಾರಣ,

ನಿನ್ನೆ ಲಖನೌನಲ್ಲಿ ನಡೆದ ಜಿಎಸ್‍ಟಿ ಕೌನ್ಸಿಲ್‍ಯಲ್ಲಿ ಯಾವುದೇ ನಿರ್ಣಯ ತೆಗೆದುಕೊಂಡಿಲ್ಲ. 

 

* ಕಬ್ಬಿಣ, ಅಲ್ಯೂಮಿನಿಯಂ, ಮ್ಯಾಂಗನೀಸ್, ತಾಮ್ರ, ನಿಖಲ್, ಸೀಸ, ನಿಕಲ್, ಕೋಬಾಲ್ಟ್, ಜಿಂಕ್, ಟಿನ್ ಕ್ರೋಮಿಯಂ ಅದಿರು ಮತ್ತು ಕಚ್ಚಾ ಲೋಹಗಳ ಮೇಲೆ ಶೇ.5ರ ಬದಲು ಶೇ.18ಕ್ಕೆ ಜಿಎಸ್‍ಟಿ(Goods and Services Tax) ಹೆಚ್ಚಿಸಲು ತೀರ್ಮಾನಿಸಲಾಗಿದೆ. ಇದರಿಂದಾಗಿ ಕಟ್ಟಡ ಕಾಮಗಾರಿ ಮತ್ತು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಬೆಲೆಗಳು ಇನ್ನಷ್ಟು ದುಬಾರಿ ಆಗಲಿವೆ. 

 

* ಕಾರ್ಬೋನೇಟೆಡ್ ಫ್ರೂಟ್ ಜ್ಯೂಸ್, ತಂಪು ಪಾನಿಯ ಮೇಲೆ ಶೇ.28ರಷ್ಟು ಜಿಎಸ್‍ಟಿ ಜೊತೆಗೆ ಶೇ.12ರಷ್ಟು ಪರಿಹಾರ ಸೆಸ್ ವಿಧಿಸಲು ತೀರ್ಮಾನಿಸಿದೆ. 

 

* ರೆಸ್ಟೊರೆಂಟ್‌, ಹೋಟೆಲ್‌ಗಳಿಂದ ಆಹಾರವನ್ನು ಗ್ರಾಹಕರಿಗೆ ತಲುಪಿಸುವ ಇ–ಕಾಮರ್ಸ್‌ ವೇದಿಕೆಗಳಾದ ಸ್ವಿಗ್ಗಿ, ಜೊಮ್ಯಾಟೊ; ತಾವು ಒದಗಿಸುವ ಸೇವೆಗಳಿಗೆ ಜಿಎಸ್‌ಟಿ ಪಾವತಿಸಬೇಕು. ಇದರಿಂದಾಗಿ ಆನ್‌ಲೈನ್‌ ಮೂಲಕ ಆರ್ಡರ್‌ ಮಾಡುವ ಆಹಾರದ ಬೆಲೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ. 

 

* ಅಂಗವಿಕಲರು ಬಳಸುವ ವಾಹನಗಳಿಗೆ ಅಳವಡಿಸಲಾಗುವ ಕಿಟ್‌ಗಳ ಮೇಲಿನ (ರೆಟ್ರೊ–ಫಿಟ್ಮೆಂಟ್‌) ಜಿಎಸ್‌ಟಿಯನ್ನು ಶೇ 5ಕ್ಕೆ ಇಳಿಕೆ ಮಾಡಲಾಗಿದೆ. 

 

* ಗುತ್ತಿಗೆ ಆಧಾರದಲ್ಲಿ ಆಮದು ಮಾಡಿಕೊಳ್ಳುವ ವಿಮಾನಗಳಿಗೆ ಎರಡು ಬಾರಿ ನೀಡಬೇಕಾದ (ಡಬಲ್‌ ಟ್ಯಾಕ್ಸೇಷನ್‌) ತೆರಿಗೆಗಳಿಂದ ವಿನಾಯಿತಿ 

 

* ಕೋವಿಡ್ ಚಿಕಿತ್ಸೆಗೆ ಬಳಸುವ ಔಷಧಿಗಳ ಮೇಲಿನ ರಿಯಾಯಿತಿ ಜಿಎಸ್‌ಟಿ ದರಗಳು ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿದೆ. 

 

* ರಾಜ್ಯ/ಕೇಂದ್ರ ಸರ್ಕಾರಗಳಿಂದ ಸಂಪೂರ್ಣ ಅನುದಾನಿತ ತರಬೇತಿ ಕಾರ್ಯಕ್ರಮಗಳು ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ. 

 

* ಬಯೋ-ಡೀಸೆಲ್ ಮೇಲಿನ ಜಿಎಸ್‌ಟಿ ದರವನ್ನು 12% ರಿಂದ 5%ಕ್ಕೆ ಇಳಿಸಲಾಗಿದೆ. 

 

* ಎರಡು ಕೋವಿಡ್ -19ಯೇತರ ಚಿಕಿತ್ಸೆಗೆ ಬಳಸುವ ಔಷಧಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿದೆ. 

 

* ಜನವರಿ 1, 2022 ರಿಂದ ಪಾದರಕ್ಷೆಗಳು ಮತ್ತು ಜವಳಿ ಮೇಲಿನ ಇನ್‌ವರ್ಟೆಡ್ ಟ್ಯಾಕ್ಸ್ ರಚನೆಯನ್ನು ಸರಿಪಡಿಸಲು ಜಿಎಸ್‌ಟಿ ಕೌನ್ಸಿಲ್ ಒಪ್ಪಿಗೆ ನೀಡಿದೆ.