ಯಥಾಸ್ಥಿತಿಯಲ್ಲಿ ರೆಪೋ ರೇಟ್

ಭಾರತೀಯ ರಿಸರ್ವ್ ಬ್ಯಾಂಕ್ ನ ಗವರ್ನರ್ ಶಕ್ತಿಕಾಂತ ದಾಸ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ.
ಸದ್ಯಕ್ಕೆ ರೆಪೋ ದರ ಶೆ.6.5 ರಷ್ಟಿದೆ. ಈ ಬಾರಿ ರೆಪೋ ಹೆಚ್ಚಿಸಿ,ಸಾರ್ವಜನಿಕರಿಗೆ ಶಾಕ್ ಸಿಗಬಹುದು ಎಂದು ಹೇಳಲಾಗಿತ್ತು. ರೆಪೋ ರೇಟ್ ಬದಲಾವಣೆ ಇಲ್ಲದ ಕಾರಣ ಸಾಲಗಳ ಮೇಲಿನ ಬಡ್ಡಿ ಹಾಗೂ ಇಎಂಐಗಳಲ್ಲಿ ಏರಿಕೆ ಸಾಧ್ಯವಿಲ್ಲ. ಹೀಗಾಗಿ ಸಾಲದಾತರು ಈ ಬಾರಿ ನಿಟ್ಟುಸಿರು ಬಿಟ್ಟಿದ್ದಾರೆ.
ಮೇ 2022 ರಿಂದ ಈಚೆಗೆ ಆರ್ ಬಿಐ ರೆಪೊ ದರದಲ್ಲಿ 250 ಮೂಲಾಂಶಗಳನ್ನು ಹೆಚ್ಚಳ ಮಾಡಿದೆ.