ಮುಂಬೈ ತಂಡವನ್ನು ಖರೀದಿಸಿದ ಅಮಿತಾಬ್ ಬಚ್ಚನ್.!

ಮುಂಬೈ ತಂಡವನ್ನು ಖರೀದಿಸಿದ ಅಮಿತಾಬ್ ಬಚ್ಚನ್.!

ಮುಂಬೈ: ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್‌ನಲ್ಲಿ (ಐಎಸ್‌ಪಿಎಲ್) ಮುಂಬೈ ತಂಡವನ್ನು ನಟ ಅಮಿತಾಬ್ ಬಚ್ಚನ್ ಖರೀದಿಸಿದ್ದಾರೆ. 

ಐಎಸ್‌ಪಿಎಲ್ ಭಾರತದ ಮೊದಲ ಟೆನಿಸ್ ಬಾಲ್ ಟಿ10 ಕ್ರಿಕೆಟ್ ಪಂದ್ಯಾವಳಿಯಾಗಿದ್ದು, ಉದ್ಘಾಟನಾ ಆವೃತ್ತಿಯು ಮಾರ್ಚ್ 2ರಿಂದ ಮಾರ್ಚ್ 9ರವರೆಗೆ ಮುಂಬೈನಲ್ಲಿ ನಡೆಯಲಿದೆ ಎಂದು ವರದಿಯಾಗಿದೆ. ಐಎಸ್‌ಪಿಎಲ್ ನಲ್ಲಿ ತಾವು ಮುಂಬೈ ತಂಡವನ್ನು ಖರೀದಿಸಿದ ಬಗ್ಗೆ ಅಮಿತಾಭ್ ಬಚ್ಚನ್ ಅವರು ತಮ್ಮ ವೈಯಕ್ತಿಕ ಬ್ಲಾಗ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 

"ಹೊಸ ದಿನ ... ಮತ್ತು ಹೊಸ ಉದ್ಯಮ ... ನನಗೆ ಗೌರವ ಮತ್ತು ಸವಲತ್ತುಗಳನ್ನು ನೀಡಿದ ಮುಂಬೈ ನಗರದ ತಂಡದ ಮಾಲೀಕರಾಗಿ ಇರಲು ಖುಷಿ ಇದೆ. ಜೊತೆಗೆ ಪ್ರತಿಭೆಗಳ ಅನಾವರಣಕ್ಕೆ ಕೊಡಲು ಹಾಗೂ ಭವ್ಯವಾದ ದೂರದೃಷ್ಟಿಯ ಭವಿಷ್ಯಕ್ಕಾಗಿ ಸೇವೆ ಸಲ್ಲಿಸುತ್ತಿರುವುದಕ್ಕೆ ಹೆಮ್ಮೆ ಇದೆ" ಎಂದು ಬಚ್ಚನ್ ಹೇಳಿದ್ದಾರೆ.