ಗುಹಾಟಿಯಲ್ಲಿ ಶ್ರೀಲಂಕಾ ವಿರುದ್ಧ ದಾಖಲೆಯ ಗೆಲುವು ಸಾಧಿಸಿದ ಭಾರತ

ಅಸ್ಸಾಂನ ಗುಹಾಟಿಯಲ್ಲಿ ಭಾರತ ಶ್ರೀಲಂಕಾ ಎದುರು ನಡೆದ ಮೊದಲ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಭಾರತ ದಾಖಲೆಯ ಗೆಲುವು ಸಾಧಿಸಿದೆ.
ಬರ್ಸಾಪರಾ ಸ್ಟೇಡಿಯಂನಲ್ಲಿ ಇಂದು ನಡೆದ ಪಂದ್ಯದಲ್ಲಿ ಭಾರತ ವಿರಾಟ್ ಕೊಹ್ಲಿ ಆಕರ್ಷಕ ಶತಕದ ನೆರವಿನಿಂದ ಏಳು ವಿಕೆಟ್‌ಗೆ 373 ಬೃಹತ್ ರನ್‌ಗಳಿಸಿತ್ತು. ಇದಕ್ಕೆ ಉತ್ತರವಾಗಿ ಶ್ರೀಲಂಕಾ ಎಂಟು ವಿಕೆಟ್‌ಗೆ 306 ರನ್ ಗಳಿಸಿ 67 ರನ್‌ಗಳಿಂದ ಸೋಲಿಗೆ ಗುರಿಯಾಯಿತು.
ಇದು ಗುಹಾಟಿಯಲ್ಲಿ ದಾಖಲಾದ ಏಕದಿನ ಪಂದ್ಯದ ಅತ್ಯಧಿಕ ಸ್ಕೋರ್ ಆಗಿದೆ. ಇದೇ ಸಮಯದಲ್ಲಿ ವಿರಾಟ್ 73 ನೇ ಅಂತರರಾಷ್ಟ್ರೀಯ ಶತಕ ದಾಖಲಿಸಿದರೆ, ವೇಗದ ಬೌಲರ್ ಉಮ್ರಾನ್ ಮಲಿಕ್ ಎಂಟು ಓವರ್‌ನಲ್ಲಿ 3 ವಿಕೆಟ್ ಕಿತ್ತು ಮಿಂಚಿದರು.