ಕೋವಿಡ್ ನಿಯಮ ಉಲ್ಲಂಘನೆ; ಬರೊಬ್ಬರಿ 1.29 ಲಕ್ಷ ರೂ.ದಂಡ ವಸೂಲಿ ಮಾಡಿದ ಪಾಲಿಕೆ

ಹುಬ್ಬಳ್ಳಿ: ಹು - ಧಾ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಒಟ್ಟು 532 ಜನರಿಂದ 1,29,050 ಲಕ್ಷ ರೂ . ದಂಡ ವಸೂಲಿ ಮಾಡಲಾಗಿದೆ. ಪಾಲಿಕೆಯಿಂದ ಇದುವರೆಗೆ ಒಟ್ಟು 77,41,100 ಲಕ್ಷ ರೂ. ದಂಡ ವಿಧಿಸಿದಂತಾಗಿದೆ. ಬುಧವಾರ ಪಾಲಿಕೆಯ ವಲಯಗಳ ವ್ಯಾಪ್ತಿಯಲ್ಲಿ ಪರಿಸರ ಅಭಿಯಂತರರು ಹಾಗೂ ಆರೋಗ್ಯ ನಿರೀಕ್ಷಕರು ಮಾಸ್ಕ್ ಧರಿಸದೆ ತಿರುಗಾಡುತ್ತಿದ್ದ 468 ಜನರಿಗೆ 1,16,250 ಲಕ್ಷ ರೂ. ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದ 64 ಜನರಿಗೆ 12,800 ರೂ. ದಂಡ ವಿಧಿಸಿದ್ದಾರೆ. ಇನ್ನಾದರು ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕಾಗಿದೆ.