ಇನ್ಮುಂದೆ ಬೆಳಗ್ಗೆ 7:30ಕ್ಕೆ ಸರ್ಕಾರಿ ಕಚೇರಿ ಓಪನ್.!- ಪಂಜಾಬ್ ಸಿಎಂ ಆದೇಶಕ್ಕೆ ಕಾರಣ ಏನು ಗೊತ್ತಾ?

ಚಂಡೀಗಡ: ಪಂಜಾಬ್‌ನಲ್ಲಿ ಸರ್ಕಾರಿ ಕಚೇರಿಗಳು ಮೇ 2ರಿಂದ ಜುಲೈ 15ರವರೆಗೆ ಬೆಳಿಗ್ಗೆ 7:30 ರಿಂದ ಮಧ್ಯಾಹ್ನ 2 ರವರೆಗೆ ತೆರೆದಿರುತ್ತವೆ ಎಂದು ಸಿಎಂ ಭಗವಂತ್ ಮಾನ್ ಶನಿವಾರ ಪ್ರಕಟಿಸಿದ್ದಾರೆ.
ಈ ಬಗ್ಗೆ ವಿಡಿಯೋ ಸಂದೇಶದಲ್ಲಿ ಮಾಹಿತಿ ನೀಡಿರುವ ಭಗವಂತ್ ಮಾನ್, 'ಈ ಕ್ರಮವು ವಿದ್ಯುತ್ ಉಳಿಸುತ್ತದೆ ಮತ್ತು ಪವರ್ ಗ್ರಿಡ್‌ನಲ್ಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ.
"ಈ ವ್ಯವಸ್ಥೆಯನ್ನು ವಿದೇಶದಲ್ಲಿ ಅನುಸರಿಸಲಾಗುತ್ತದೆ. ಅಲ್ಲಿ ಜನರು ಸೂರ್ಯನ ಬೆಳಕಿನ ಗರಿಷ್ಠ ಪ್ರಯೋಜನಗಳನ್ನು ಪಡೆದುಕೊಳ್ಳಲು ತಮ್ಮ ವೇಳಾಪಟ್ಟಿಯನ್ನು ಬದಲಾಯಿಸುತ್ತಾರೆ" ಭಗವಂತ್ ಮಾನ್ ತಮ್ಮ ಆದೇಶಕ್ಕೆ ಸ್ಪಷ್ಟನೆ ನೀಡಿದ್ದಾರೆ.