TATA ಟೆಕ್ನಾಲಜೀಸ್‌ಗೆ 'Ransomware' ಮಾಲ್‌ವೇರ್‌

TATA ಟೆಕ್ನಾಲಜೀಸ್‌ಗೆ 'Ransomware' ಮಾಲ್‌ವೇರ್‌

ಅಟ್ಯಾಕ್ : ತಾತ್ಕಾಲಿಕ IT ಸೇವೆ ಸ್ಥಗಿತ!

ಟಾಟಾ ಟಿಕ್ನಾಲಾಜೀಸ್ Ransomware ಮಾಲ್ವೇರ್ ದಾಳಿಗೆ ತುತ್ತಾದ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಐಟಿ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತ ಗೊಳಿಸಲಾಗಿದೆ ಎಂದು ಕಂಪನಿ ಶುಕ್ರವಾರ ತಿಳಿಸಿದೆ. 

Ransomware ಮಾಲ್ವೇರ್ ಹಿನ್ನೆಲೆ ಅಗತ್ಯ ಪರಿಹಾರ ಕ್ರಮ ತೆಗೆದುಕೊಳ್ಳಲು ಮತ್ತು ಸಮಸ್ಯೆಯ ಮೂಲ ಕಾರಣವನ್ನು ನಿರ್ಧರಿಸಲು ವಿವರವಾದ ತನಿಖೆಗೆ ಅದೇಶಿಸಲಾಗಿದೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ ಎಂದು ವರದಿಯಾಗಿದೆ. 

ಘಟನೆಯ ಕುರಿತು ಹೇಳಿಕೆ ನೀಡಿರುವ ಟಾಟಾ ಟೆಕ್ನಾಲಜೀಸ್, 'ಮುನ್ನೆಚ್ಚರಿಕೆ ಕ್ರಮವಾಗಿ, ಕೆಲವು ಐಟಿ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಮತ್ತು ಈಗ ಮರುಸ್ಥಾಪಿಸಲಾಗಿದೆ. ನಮ್ಮ ಕ್ಲೈಂಟ್ ವಿತರಣಾ ಸೇವೆಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ಯಾವುದೇ ಪರಿಣಾಮ ಬೀರುವುದಿಲ್ಲ.” 

ಮೂಲ ಕಾರಣವನ್ನು ನಿರ್ಣಯಿಸಲು ಮತ್ತು ಅಗತ್ಯ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಲು ತಜ್ಞರೊಂದಿಗೆ ಸಮಾಲೋಚನೆಯಲ್ಲಿ ಹೆಚ್ಚಿನ ವಿವರವಾದ ತನಿಖೆ ನಡೆಯುತ್ತಿದೆ.