ಜಗತ್ತಿನ ಶ್ರೀಮಂತ ಬಿಲ್ ಗೇಟ್ಸ್ ಗೆ ಕೊರೊನಾ ದೃಢ

ಜಗತ್ತಿನ ಶ್ರೀಮಂತ ಬಿಲ್ ಗೇಟ್ಸ್ ಗೆ ಕೊರೊನಾ ದೃಢ

ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ, ಕೊರೊನಾ ಸಮಯದಲ್ಲಿ ಬಡ ರಾಷ್ಟ್ರಗಳಿಗೆ ಕೋವಿಡ್ ಲಸಿಕೆ ದಾನ ಮಾಡಿದ್ದ ಜಗತ್ತಿನ ಶ್ರೀಮಂತ ವ್ಯಕ್ತಿ ಬಿಲ್ ಗೇಟ್ಸ್ ಅವರಿಗೆ ಕೋವಿಡ್ ದೃಢಪಟ್ಟಿದೆ. 

ಈ ಕುರಿತು ಟ್ವೀಟ್ ಮಾಡಿರುವ ಬಿಲ್ ಗೇಟ್ಸ್ ನಾನು ಕೋವಿಟ್ ಪರೀಕ್ಷೆ ಮಾಡಿಸಿಕೊಂಡಾಗ ಕೊರೊನಾದ ಸೌಮ್ಯಲಕ್ಷಣಗಳು ಕಂಡುಬಂದಿವೆ. ಸದ್ಯ ನಾನು ಆರೋಗ್ಯವಾಗಿದ್ದೇನೆ. ವೈದ್ಯರ ಸಲಹೆಯಂತೆ ಐಸೋಲೆಟ್ ಆಗಿರುವ ಬಗ್ಗೆ ಹೇಳಿದ್ದಾರೆ.ಮಾತ್ರವಲ್ಲದೆ ನಾನು ಕೋವಿಡ್ ಲಸಿಕೆ ಪಡೆದಿರುವುದರಿಂದ ಶೀಘ್ರ ಚೇರಿಸಿಕೊಳ್ಳುವ ವಿಶ್ವಾಸವಿದೆ ಎಂದು ಟ್ವೀಟ್ ಮಾಡಿದ್ಧಾರೆ.