ವಿದೇಶಗಳಲ್ಲಿ ಮತ್ತೆ ಕೋವಿಡ್ ಎಮರ್ಜೆನ್ಸಿ..! ಹುಷಾರಾಗಿರಿ..

ವಿದೇಶಗಳಲ್ಲಿ ಮತ್ತೆ ಕೋವಿಡ್ ಎಮರ್ಜೆನ್ಸಿ..! ಹುಷಾರಾಗಿರಿ..

ವಿಶ್ವಕ್ಕೆ ಕಂಟಕವಾಗಿ ಪರಿಣಮಿಸಿದ ಡೆಡ್ಲಿ ಸೋಂಕು ಕೊರೊನಾ ಇನ್ನೇನು ತಗ್ಗುತ್ತಿದ್ದೇ ಎನ್ನುವಷ್ಟರಲ್ಲಿ ವಿದೇಶದಲ್ಲಿ ಮತ್ತೆ ತನ್ನ ಆರ್ಭಟವನ್ನು ಶುರು ಮಾಡಿದೆ. ಯುರೋಪಿನ 47 ದೇಶಗಳ 39 ದೇಶಗಳಲ್ಲಿ ಪಾಸಿಟಿವ್ ಕೊರೊನಾ ರೋಗಿಗಳು 23% ದಷ್ಟು ತ್ವರಿತ ಗತಿಯಲ್ಲಿ ಮತ್ತು ಸಾವುಗಳು 14% ದಷ್ಟು ಹೆಚ್ಚುತ್ತಿದೆ. ಈಗಷ್ಟೇ ಸುಧಾರಣೆಯ ಹಾದಿ ಹಿಡಿದಿರುವ ಜರ್ಮನಿ, ಇಟಲಿ ಮತ್ತು ಸ್ಪೇನ್ ನಲ್ಲಿ ಹೊಸ ಕೇಸ್ ಗಳ ಸಂಖ್ಯೆ ಹೆಚ್ಚುತ್ತಿವೆ. ಏಷ್ಯಾದ ದೇಶಗಳಲ್ಲಿ ಕೊರೊನಾ ಪರಿಸ್ಥಿತಿ ಸುಧಾರಿಸುತ್ತಿದೆ. ಏಷ್ಯಾದಲ್ಲಿ ಪಾಸಿಟಿವ್ ಪ್ರಕರಣಗಳು 8% ಮತ್ತು ಸಾವುಗಳು 4% ರಷ್ಟು ಕಡಿಮೆಯಾಗಿವೆ. ಯುಕೆಯಲ್ಲಿ ಹೊಸ ಕೊರೊನಾ ಪ್ರಕರಣಗಳು 16% ನಷ್ಟು ಏರಿಕೆ ದಾಖಲಿಸಿದೆ, ಆದರೆ ರಷ್ಯಾವು 17% ನಷ್ಟು ವೇಗವನ್ನು ದಾಖಲಿಸಿದೆ. ಚಳಿಗಾಲದ ಉತ್ಕರ್ಷದ ನಂತರ ಹೊಸ ಪ್ರಕರಣಗಳು ಮತ್ತಷ್ಟು ಉಲ್ಬಣವಾಗುವ ನಿರೀಕ್ಷೆಯಿದೆ ಎಂದು ಡಬ್ಲ್ಯೂಎಚ್ಒ ಎಚ್ಚರಿಸಿದೆ.