ಬೂಸ್ಟರ್ ಡೋಸ್ ಲಸಿಕೆ ನೀಡಲು ಮಾರ್ಗಸೂಚಿ ಪ್ರಕಟ

ಬೂಸ್ಟರ್ ಡೋಸ್ ಲಸಿಕೆ ನೀಡಲು ಮಾರ್ಗಸೂಚಿ ಪ್ರಕಟ

ನವದೆಹಲಿ: ಮುನ್ನೆಚ್ಚರಿಕೆ ಡೋಸ್ (ಬೂಸ್ಟರ್ ಡೋಸ್) ಕೋವಿಡ್ ಲಸಿಕೆ ನೀಡಲು ಕೇಂದ್ರ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ. 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ: * ಜನವರಿ 3ರಿಂದ ಕೋವಿಡ್ ಲಸಿಕೆ ನೀಡಲಾಗುವುದು. *'ಕೋವ್ಯಾಕ್ಸಿನ್' ಲಸಿಕೆ ವಿತರಣೆ *15 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿವರು 'ಕೋ-ವಿನ್' ಮೂಲಕ ನೋಂದಾಯಿಸಬಹುದು. ಲಸಿಕೆ ಕೇಂದ್ರಕ್ಕೆ ತೆರಳಿ ಹೆಸರು ನೋಂದಾಯಿಸಬಹುದು. * ಹುಟ್ಟಿದ ವರ್ಷ 2007 ಅಥವಾ ಅದಕ್ಕಿಂತ ಮೊದಲಿನವರು ಅರ್ಹರು. ಆರೋಗ್ಯ, ಮುಂಚೂಣಿಯ ಕಾರ್ಯಕರ್ತರು ಮತ್ತು ಆರೋಗ್ಯ ಸಮಸ್ಯೆ ಇರುವ 60 ವರ್ಷ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕೆ ಡೋಸ್ ಮಾರ್ಗಸೂಚಿ: * ಜ.10ರಿಂದ ಮುನ್ನೆಚ್ಚೆರಿಕೆ ಡೋಸ್ ನೀಡಲಾಗುವುದು. * ಎರಡನೇ ಡೋಸ್ ಹಾಗೂ ಬೂಸ್ಟರ್ ಡೋಸ್ ನಡುವಣ ಅಂತರ 9 ತಿಂಗಳು ಅಥವಾ 39 ವಾರ. * ಆರೋಗ್ಯ ಸಮಸ್ಯೆ ಇರುವ 60 ವರ್ಷ ಮೇಲ್ಪಟ್ಟವರಿಗೆ ವೈದ್ಯರ ಶಿಫಾರಸಿನ ಮೇರೆಗೆ ಜ.10ರಿಂದ ಮುನ್ನಚ್ಚೆರಿಕೆ ಡೋಸ್ ನೀಡಲಾಗುವುದು. *ಈಗಾಗಲೇ ಅಸ್ತಿತ್ವದಲ್ಲಿರುವ ಕೋ-ವಿನ್ ಖಾತೆಯ ಮೂಲಕ ಮುನ್ನೆಚ್ಚರಿಕೆ ಡೋಸ್ ಪಡೆಯಬಹುದು. *ಅಂತಹ ಫಲಾನುಭವಿಗಳಿಗೆ ಮುನ್ನೆಚ್ಚರಿಕೆ ಡೋಸ್ ಹಾಕಿಸಿಕೊಳ್ಳಲು ಕೋ-ವಿನ್ ಮೂಲಕ ಎಸ್ ಎಂಎಸ್ ಸಂದೇಶ ರವಾನೆಯಾಗಲಿದೆ. *ಕೋವಿಡ್ ಲಸಿಕೆ ಪ್ರಮಾಣಪತ್ರಗಳಲ್ಲಿ ಮುನ್ನೆಚ್ಚರಿಕೆ ಡೋಸ್ ವಿವರ ನಮೂದಿಸಲಾಗುವುದು.