PM ಭದ್ರತೆ ಲೋಪ ಕೇಸ್ ಶುಕ್ರವಾರ ಸುಪ್ರೀಂ ನಲ್ಲಿ ವಿಚಾರಣೆ

PM ಭದ್ರತೆ ಲೋಪ ಕೇಸ್ ಶುಕ್ರವಾರ ಸುಪ್ರೀಂ ನಲ್ಲಿ ವಿಚಾರಣೆ

ಚಂಡೀಗಢ: ಪಂಜಾಬ್ ನ ಫಿರೋಜ್ ಪುರದಲ್ಲಿ ಜ.5 ರಂದು ಭದ್ರತಾ ಲೋಪಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ “ಹುಸೇನಿವಾಲಾದಲ್ಲಿನ ರಾಷ್ಟ್ರೀಯ ಹುತಾತ್ಮರ ಸ್ಮಾರಕದಿಂದ ಸುಮಾರು 30-ಕಿಮೀ ದೂರದಲ್ಲಿ, ಪ್ರಧಾನಿಯವರು 15-20 ನಿಮಿಷಗಳ ಕಾಲ ಫ್ಲೈಓವರ್ ಮೇಲೆ ಸಿಲುಕಿಕೊಂಡರು. ಇದರಿಂದ ಮುಂದಿನ ಕಾರ್ಯಕ್ರಮ ರದ್ದುಗೊಳಿಸಿದ ಪ್ರಧಾನಿ ಮರಳಿ ದೆಹಲಿಗೆ ವಾಪಸ್ಸಾದ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿದೆ. ಇನ್ನು ಇದೇ ವಿಚಾರವಾಗಿ ಸುಪ್ರೀಂ ಕೋರ್ಟ್ ಶುಕ್ರವಾರ ಸತ್ಯಾಸತ್ಯೆಯ ಬಗ್ಗೆ ಚರ್ಚೆ ನಡೆಸಲಿದೆ. ಪ್ರಧಾನಿ ಮೋದಿ ಅವರ ಭದ್ರತಾ ಲೋಪ ಪ್ರಕರಣವನ್ನು, ಸುಪ್ರೀಂಕೋರ್ಟ್ ಹಿರಿಯ ವಕೀಲ ಮಣಿಂದರ್ ಸಿಂಗ್ ಅವರು ಮುಖ್ಯ ನ್ಯಾಯಮೂರ್ತಿ ಎನ್ವಿ ರಮಣ ಅವರ ಮುಂದೆ ಪ್ರಸ್ತಾಪಿಸಿದ್ದಾರೆ. ಸುಪ್ರೀಂಕೋರ್ಟ್ ನೇತೃತ್ವದಲ್ಲಿ ತನಿಖೆಗೆ ಅವರು ಮನವಿ ಸಲ್ಲಿಸಿದ್ದಾರೆ. ಸದ್ಯ ಅರ್ಜಿಯ ಪ್ರತಿಯೊಂದನ್ನು ಕೇಂದ್ರ ಸರ್ಕಾರ ಮತ್ತು ಪಂಜಾಬ್ ಸರ್ಕಾರಕ್ಕೆ ಗುರುವಾರ ನೀಡುವಂತೆ ಸಿಂಗ್ ಅವರಿಗೆ ಕೋರ್ಟ್ ಸೂಚಿಸಿದೆ. ಒಟ್ಟಾರೆಯಲ್ಲಿ ಪ್ರಧಾನಿಗಳಿಗೆ ಉಂಟಾದ ಭದ್ರತಾ ಲೋಪಕ್ಕೆ ಕಾರಣವೇನು ಎಂದು ನಾಳೆ ತಿಳಿಯಲಿದೆ