ಸತತ ಏಳುವರೆ ತಾಸು ಝೂಮ್ ಮೀಟ್‌ನಲ್ಲಿದ್ದ ಪೇ ಟಿಎಂ ಸಿಇಓ: ಜನ ಏನಂದ್ರು ಗೊತ್ತಾ?

ಪೇಟಿಎಂ ಸಿ.ಇ.ಒ ವಿಜಯ್ ಶೇಖರ್ ಶರ್ಮಾ ಅವರು ಸತತ 7 ತಾಸು 45 ನಿಮಿಷಗಳ ಕಾಲ ಝೂಮ್ ಮೀಟ್‌ನಲ್ಲಿ ಇದ್ದರಂತೆ. ಈ ಬಗ್ಗೆ ಅವರು ಟ್ವಿಟರ್ ನಲ್ಲಿ ಬರೆದುಕೊಂಡಿದ್ದರು.
ವಿಜಯ್ ಶೇಖರ್ ಶರ್ಮಾ ಅವರ ಈ ಟ್ವೀಟ್‌ಗೆ ಅನೇಕ ರಿಟ್ವೀಟ್ ಬಂದಿವೆ. ಮಜಮಜವಾಗಿ ಕೆಲವರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. 'ಸರ್ ನೀವು ಬ್ಲೂಟೂತ್ ಇಯರ್ ಫೋನ್ ಬಳಸುತ್ತಿದ್ದರೆ ದಯವಿಟ್ಟು ಅದು ಯಾವ ಬ್ರ್ಯಾಂಡ್ ಎಂದು ತಿಳಿಸುವಿರಾ' ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಇನ್ನೊಬ್ಬರು 'ನಿಮ್ಮದು ಅದ್ಭುತ ಕಾರ್ಯ' ಎಂದು ಶ್ಲಾಘಿಸಿದ್ದಾರೆ.