ಬೇಸಿಗೆಯ ಬಿಸಿಗಾಳಿ ಎದುರಿಸಲು ಸಿದ್ಧತೆ : ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ

ಬೇಸಿಗೆಯ ಬಿಸಿಗಾಳಿ ಎದುರಿಸಲು ಸಿದ್ಧತೆ : ಪ್ರಧಾನಿ ಮೋದಿ ಉನ್ನತ ಮಟ್ಟದ ಸಭೆ

ನವದೆಹಲಿ: ಮುಂಬರುವ ಬೇಸಿಗೆ ದಿನಗಳಲ್ಲಿ ಬಿಸಿ ಗಾಳಿಯನ್ನು ಎದುರಿಸಲು ಮಾಡಿಕೊಳ್ಳಲಾಗಿರುವ ಸಿದ್ಧತೆ ಬಗ್ಗೆ ಪರಾಮರ್ಶೆ ನಡೆಸಲು ಪ್ರಧಾನಿ ನರೇಂದ್ರ ಮೋದಿ ಇಂದು ಉನ್ನತ ಮಟ್ಟದ ಸಭೆ ನಡೆಸಿದರು. 

 

ಈ ಸಭೆಯಲ್ಲಿ ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು ಪ್ರಧಾನಿಯವರಿಗೆ ಮುಂದಿನ ಕೆಲವು ತಿಂಗಳುಗಳ ಹವಾಮಾನ ಮುನ್ಸೂಚನೆಯ ವಿವರ ನೀಡಿದರು. ಮುಂದಿನ ಋತುವಿನಲ್ಲಿ ಸಹಜ ಮುಂಗಾರು ಇರುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು ಎಂದು ಪ್ರಧಾನ ಮಂತ್ರಿಗಳ ಕಾರ್ಯಾಲಯ ತಿಳಿಸಿದೆ. 

ಬೇಸಿಗೆಯ ಹಿನ್ನೆಲೆಯಲ್ಲಿ ನಾಗರಿಕರು, ವೈದ್ಯಕೀಯ ವೃತ್ತಿಪರರು, ಪುರಸಭೆ ಮತ್ತು ಪಂಚಾಯತ್ ಅಧಿಕಾರಿಗಳು, ಅಗ್ನಿಶಾಮಕ ದಳದಂತಹ ವಿಪತ್ತು ಸ್ಪಂದನಾ ತಂಡಗಳೂ ಸೇರಿದಂತೆ ಎಲ್ಲರಿಗೂ ಪ್ರತ್ಯೇಕ ಜಾಗೃತಿ ಸಂದೇಶವನ್ನು ಕಳುಹಿಸಬೇಕು ಎಂದು ಪ್ರಧಾನಮಂತ್ರಿ ಸಭೆಯಲ್ಲಿ ಸಲಹೆ ನೀಡಿದರು.