ಪ್ರತಿ ಲೀಟರ್ ಹಾಲಿಗೆ 3 ರೂ.ಏರಿಸುವಂತೆ ಸರ್ಕಾರಕ್ಕೆ KMF ಮನವಿ

ಪ್ರತಿ ಲೀಟರ್ ಹಾಲಿಗೆ 3 ರೂ.ಏರಿಸುವಂತೆ ಸರ್ಕಾರಕ್ಕೆ KMF ಮನವಿ

ಬೆಂಗಳೂರು: ಮೊದಲೇ ಜನ ಬೆಲೆ ಏರಿಕೆಯಿಂದ ತತ್ತರಿಸುತ್ತಿದ್ದಾರೆ. ಅದರ ಮಧ್ಯೆ ಈಗ ಹಾಲಿನ ದರ ಏರಿಕೆಯ ಪಸ್ತಾಪ ಸರ್ಕಾರದ ಮುಂದೆ ಬಂದು ಬಿಟ್ಟಿದೆ. ಪ್ರತಿ ಲೀಟರ್‌ ಗೆ 3 ರೂಪಾಯಿ ಏರಿಸಬೇಕು ಎಂದು ಕೆಎಂಎಫ್ ಸರ್ಕಾರಕ್ಕೆ ಮನವಿ ಮಾಡಿದೆ. 

ಈ ವಿಚಾರವಾಗಿಯೇ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಈ ಒಂದು ಪ್ರಸ್ತಾವಣೆ ಸಲ್ಲಿಸಿದ್ದಾರೆ. ವಿವಿಧ ಹಾಲು ಒಕ್ಕೂಟದ ಜೊತೆಗೆ ಚರ್ಚಿಸಿದ ಬಳಿಕವೇ ಈ ಒಂದು ಮನವಿ ಸಲ್ಲಿಸಲಾಗಿದೆ. 

ಖಾಸಗಿ ಸಂಸ್ಥೆಗಳ ಹಾಲಿನ ದರ 8 ರಿಂದ 10 ರೂಪಾಯಿ ಜಾಸ್ತಿ ಇದೆ. ಈ ಹಿನ್ನೆಲೆಯಲ್ಲಿಯೇ 14 ಹಾಲು ಒಕ್ಕೂಟಗಳು ಪ್ರತಿ ಲೀಟರ್‌ ಗೆ 5 ರೂಪಾಯಿ ಏರಿಸುವಂತೆ ಮನವಿ ಮಾಡಿದೆ. ಆದರೆ, ಐದು ಇಲ್ಲದೇ ಇದ್ದರೂ ಕನಿಷ್ಟ 3 ರೂಪಾಯಿ ಏರಿಕೆ ಅನುಮತಿ ನೀಡಬೇಕು ಎಂದು ಪ್ರಸ್ತಾವನೆಯಲ್ಲಿ ಕೇಳಿಕೊಳ್ಳಲಾಗಿದೆ.