ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ 3.9 ತೀವ್ರತೆಯ ಭೂಕಂಪ

ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ 3.9 ತೀವ್ರತೆಯ ಭೂಕಂಪ ದಾಖಲಾಗಿದೆ. ಜಮ್ಮು ಕಾಶ್ಮೀರದ ಬಂಡೀಫೊರಾದಲ್ಲಿ ಭೂಕಂಪ ಸಂಭವಿಸಿದೆ. ಬಂಡೀಪೋರಾದಲ್ಲಿ ಬೆಳಗ್ಗೆ 6.57ರ ಸುಮಾರಿಗೆ ಭೂಕಂಪ ಸಂಭವಿಸಿದೆ.
ಭೂಕಂಪನವು ಭೂಮಿಯ ಹೊರಪದರದೊಳಗೆ 10 ಕಿಲೋಮೀಟರ್‌ಗಳಷ್ಟು ಅಕ್ಷಾಂಶ 34.42 ಡಿಗ್ರಿ ಉತ್ತರ ಮತ್ತು ರೇಖಾಂಶ 74.88 ಡಿಗ್ರಿ ಪೂರ್ವದಲ್ಲಿ ಸಂಭವಿಸಿದೆ.
ಎಲ್ಲಿಯೂ ಆಸ್ತಿಪಾಸ್ತಿ ನಷ್ಟದ ಕುರಿತು ವರದಿಯಾಗಿಲ್ಲ. ಉತ್ತರಾಖಂಡದ ಉತ್ತರಕಾಶಿಯಲ್ಲಿ ಕೂಡ ಭೂಕಂಪ ಸಂಭವಿಸಿದೆ. ರಾತ್ರಿ 12.45ರ ಸುಮಾರಿಗೆ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 2.5 ತೀವ್ರತೆ ದಾಖಲಾಗಿದೆ.