ಪಿಎಂ ಸೂರ್ಯ ಘರ್‌ ಯೋಜನೆ...ಅಧಿಕಾರಿಗಳೊಂದಿಗೆ ಜೋಶಿ ಸಭೆ

ಪಿಎಂ ಸೂರ್ಯ ಘರ್‌ ಯೋಜನೆ...ಅಧಿಕಾರಿಗಳೊಂದಿಗೆ ಜೋಶಿ ಸಭೆ

ದೆಹಲಿ : ದೇಶದ ಒಂದು ಕೋಟಿ ಮನೆಗಳ ಛಾವಣಿಗೆ ಸೋಲಾರ್‌ ಫಲಕ ಅಳವಡಿಸಿ ಉಚಿತ ವಿದ್ಯುತ್‌ ಒದಗಿಸುವ ಪಿಎಂ ಸೂರ್ಯ ಘರ್‌ ಯೋಜನೆಯನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ. ಇಂಧನ ಕ್ಷೇತ್ರದಲ್ಲಿ ಆತ್ಮನಿರ್ಭರ ಪ್ರಧಾನಿ ಆಶಯವಾಗಿದ್ದು, ಸೂರ್ಯ ಘರ್ ಯೋಜನೆ ಇದಕ್ಕೆ ಪ್ರತೀಕವಾಗಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ. 

ನವದೆಹಲಿಯಲ್ಲಿ ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ ಕಾರ್ಯದರ್ಶಿ ಮತ್ತು ಹಿರಿಯ ಅಧಿಕಾರಿಗಳೊಂದಿಗೆ ಸಮಗ್ರ ಪರಿಶೀಲನೆ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಈ ನೂತನ ಸೂರ್ಯ ಘರ್ ಯೋಜನೆಯಡಿ ದೇಶಾದ್ಯಂತ 1 ಕೋಟಿ ಗ್ರಾಹಕರು 300 ಯೂನಿಟ್ ಉಚಿತ ವಿದ್ಯುತ್ ಪಡೆಯಲು ಅವಕಾಶವಿದೆ ಎಂದು ತಿಳಿಸಿದರು. 

ದೇಶದ ನಾನಾ ರಾಜ್ಯಗಳು, ವಿತರಕ ಘಟಕಗಳು ಮತ್ತು ನಾಗರಿಕರು ಈ ಯೋಜನೆಯ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳುವಂತೆ ಪ್ರೇರೇಪಿಸಬೇಕು ಎಂದು ಈ ಮಹತ್ವದ ಸಭೆಯಲ್ಲಿ ಸಚಿವ ಜೋಶಿ ಮಾರ್ಗದರ್ಶನ ನೀಡಿದರು.