ಪಿಜಿ ದಂತ ವೈದ್ಯಕೀಯ... ನೋಂದಣಿಗೆ ನಾಳೆ ಅವಕಾಶ

ಪಿಜಿ ದಂತ ವೈದ್ಯಕೀಯ... ನೋಂದಣಿಗೆ ನಾಳೆ ಅವಕಾಶ

ಬೆಂಗಳೂರು : ಪಿಜಿ ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ದಿನಾಂಕವನ್ನು ಜುಲೈ 11 ರ ಮಧ್ಯಾಹ್ನ 12ರವರೆಗೆ ಹಾಗೂ ಶುಲ್ಕ ಪಾವತಿಗೆ ಜುಲೈ 11ರ ಮಧ್ಯಾಹ್ನ 3 ರವರೆಗೆ ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. 

ನೋಂದಣಿ ಮಾಡಿರುವ ಅಭ್ಯರ್ಥಿಗಳು ಜುಲೈ 12ರ ಮಧ್ಯಾಹ್ನ 12 ರೊಳಗೆ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕು ಎಂದು ಸೂಚಿಸಲಾಗಿದೆ. ದಾಖಲೆಗಳ ಪರಿಶೀಲನೆಗೆ ಸಂಬಂಧಿಸಿದಂತೆ ಹೆಚ್ಚಿನ ವಿವರಗಳಿಗಾಗಿ ಪ್ರಾಧಿಕಾರದ ವೆಬ್‌ಸೈಟ್ ನೋಡಬೇಕೆಂದು ಸ್ಪಷ್ಟಪಡಿಸಲಾಗಿದೆ.