ಮಾರಕ ಕೊರೊನಾ ಸೋಂಕಿನಿಂದ ನ್ಯೂಜಿಲೆಂಡ್ ಮುಕ್ತ: ಎಲ್ಲ ನಿರ್ಬಂಧಗಳನ್ನು ರದ್ದುಗೊಳಿಸಿದ ಸರ್ಕಾರ

ಮಾರಕ ಕೊರೊನಾ ಸೋಂಕಿನಿಂದ ನ್ಯೂಜಿಲೆಂಡ್ ಮುಕ್ತ: ಎಲ್ಲ ನಿರ್ಬಂಧಗಳನ್ನು ರದ್ದುಗೊಳಿಸಿದ ಸರ್ಕಾರ

ನವದೆಹಲಿ: ಚೀನಾದ ವುಹಾನ್ ನಿಂದ ವಿಶ್ವಕ್ಕೆ ವ್ಯಾಪಿಸಿದ ಕೊರೊನಾ ವೈರಸ್ ಸೋಂಕು ಜಗತ್ತಿಗೆ ಮಾರಕವಾಗಿ ಕಾಡುತ್ತಿದೆ. ಈ ಮಧ್ಯೆ ನ್ಯೂಜಿಲೆಂಡ್ ರಾಷ್ಟ್ರ ತಾನು ಕೊರೊನಾ ಸೋಂಕಿನಿಂದ ಮುಕ್ತವಾಗಿದ್ದು, ಎಲ್ಲಾ ನಿರ್ಬಂಧಗಳನ್ನು ತೆಗೆದು ಹಾಕಲಾಗಿದೆ ಎಂದು ಘೋಷಿಸಿದೆ. 

ನ್ಯೂಜಿಲೆಂಡ್ ಪ್ರಧಾನಿ ಜೆಸಿಂದಾ ಆರ್ಡೆನ್ , ಭಾನುವಾರ ಮಧ್ಯರಾತ್ರಿ 12 ಗಂಟೆಯಿಂದ ಕೊರೊನಾ ನಿರ್ಬಂಧಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಸಾಮಾಜಿಕ ಅಂತರ, ಸಾರ್ವಜನಿಕ ಸಭೆ, ಕಾರ್ಯಕ್ರಮಗಳು ಮತ್ತು ಸ್ಥಳಗಳಲ್ಲಿ ಇಷ್ಟೇ ಸಂಖ್ಯೆಯ ಜನರು ಇರಬೇಕು ಎಂಬ ನಿಯಮ ಸೇರಿ ಎಲ್ಲ ಕೊರೊನಾ ನಿಯಮ-ನಿರ್ಬಂಧಗಳನ್ನು ರದ್ದುಗೊಳಿಸಿದ್ದಾಗಿ ತಿಳಿಸಿದೆ. 

ಕಳೆದೆರಡು ವಾರಗಳಿಂದ ನ್ಯೂಜಿಲೆಂಡ್ ನಲ್ಲಿ ಯಾವುದೇ ಸೋಂಕು ಪ್ರಕರಣಗಳು ಪತ್ತೆಯಾಗಿಲ್ಲ. ಹಾಗಾಗಿ ತಮ್ಮ ರಾಷ್ಟ್ರ ಕೋವಿಡ್ ಮುಕ್ತವಾಗಿದೆ. ರಾಷ್ಟ್ರ ಈಗ ಸುರಕ್ಷಿತವಾಗಿದ್ದು, ಬಲಿಷ್ಠವಾದ ಸ್ಥಾನದಲ್ಲಿದೆ. ಆದರೂ ಕೋವಿಡ್ ಪೂರ್ವದ ಪರಿಸ್ಥಿತಿಗೆ ಹಿಂದಿರುಗಲು ಸಾಕಷ್ಟು ಕಷ್ಟಪಡಬೇಕಾಗುತ್ತದೆ. ಆರೋಗ್ಯಕರವಾದ ನ್ಯೂಜಿಲೆಂಡ್ ನಿರ್ಮಾಣಕ್ಕೆ ಒತ್ತು ಕೊಟ್ಟ ರೀತಿಯಲ್ಲೇ ಆರ್ಥಿಕ ಪುನರುತ್ಥಾನಕ್ಕೂ ಹೆಚ್ಚಿನ ಒತ್ತು ನೀಡಿ ಕೆಲಸ ಮಾಡಲಾಗುವುದು ಎಂದು ತಿಳಿಸಿದ್ದಾರೆ.