ಪ್ಲೈ ಓವರ್ ಸಲಹಾ ಸಮಿತಿ ಸಭೆ: ನಿರ್ಮಾಣದ ಕುರಿತು ಮಹತ್ವದ ಚರ್ಚೆ

ಹುಬ್ಬಳ್ಳಿ:ವಾಣಿಜ್ಯನಗರಿ ಹುಬ್ಬಳ್ಳಿಯ ಮಹತ್ವಪೂರ್ಣ ಯೋಜನೆಗಳಲ್ಲಿ ಒಂದಾಗಿರುವ ಪ್ಲೈ ಓವರ್ ನಿರ್ಮಾಣದ ಕುರಿತು ಸಲಹಾ ಸಮಿತಿಯ ಸಭೆಯು ಜಿಲ್ಲಾಧಿಕಾರಿ ನಿತೀಶ್ ಪಾಟೀಲ್ ಅಧ್ಯಕ್ಷತೆಯಲ್ಲಿ ಬಿವಿಬಿ ಕಾಲೇಜು ಸೆನೆಟ್ ಹಾಲ್‌ನಲ್ಲಿ ಹುಬ್ಬಳ್ಳಿ ಚನ್ನಮ್ಮ ವೃತ್ತದ ಫ್ಲೈ ಓವರ್ ನಿರ್ಮಾಣ ಕುರಿತು ಸಲಹಾ ಸಮಿತಿ ಜರುಗಿತು. ಸಲಹಾ ಸಮಿತಿ ಅಧ್ಯಕ್ಷರು ಹಾಗೂ ಕೆ.ಎಲ್.ಇ. ಇಂಜಿನಿಯರಿಂಗ್ ಕಾಲೇಜು ಉಪ ಕುಲಪತಿ ಅಶೋಕ ಶೆಟ್ಟರ್, ಪೊಲೀಸ್ ಆಯುಕ್ತ ಲಾಭುರಾಮ್ , ವಾ.ಕ.ರ.ಸಾ.ಸಂ ಹಾಗೂ ಬಿ.ಆರ್.ಟಿ.ಎಸ್ ವ್ಯವಸ್ಥಾಪಕ ನಿರ್ದೇಶಕ ಗುರುದತ್ ಹೆಗಡೆ, ಧಾರವಾಡ ಐ.ಐ.ಟಿ. ಡೀನ್, ಪ್ರೋ.ನಾಗೇಶ ಐಯ್ಯರ , ಡಿ.ಆರ್.ಎನ್ . ಇನ್ಫ್ರಾಸ್ಟಕ್ಚರ್, ವ್ಯವಸ್ಥಾಪಕ ನಿರ್ದೇಶಕ ದಿನೇಶ ನಾಯಕ , ರಾಷ್ಟ್ರೀಯ ಹೆದ್ದಾರಿಗಳ ವಲಯದ ಮುಖ್ಯ ಅಭಿಯಂತರರು , ವಿಟಿಯು ಸೆಂಟರ್ ಆಫ್ ಎಕ್ಸಲೆನ್ಸ್ ಸ್ಕೂಲ್ ಆಫ್ ಸಸ್ಪೆನೇಬಲ್ ಅರ್ಬನ್ ಪ್ಲಾನಿಂಗ್ & ಸ್ಮಾರ್ಟ್ ಸಿಟಿ ಡಿಸೈನ್ ನಿರ್ದೇಶಕ ಪ್ರೊ. ಎಮ್. ಎನ್. ಚಂದ್ರಶೇಖರ , ಸೇರಿದಂತೆ ಪಾಲಿಕೆ ಸಹಾಯಕ ಆಯುಕ್ತ ಅಜೀಜ್ ದೇಸಾಯಿ ಸೇರಿದಂತೆ ಮತ್ತಿತರು ಭಾಗವಹಿಸಿದ್ದರು.