ಕುಂದಗೋಳ : ಶಾಸಕರ ಸಹಕಾರ ಕಲಾಪ ವೀಕ್ಷಿಸಿದ ಶಾಲಾ ಮಕ್ಕಳು ಶಿಕ್ಷಕರು ಖುಷ್

ಕುಂದಗೋಳ : ಶಾಸಕರ ಸಹಕಾರ ಕಲಾಪ ವೀಕ್ಷಿಸಿದ ಶಾಲಾ ಮಕ್ಕಳು ಶಿಕ್ಷಕರು ಖುಷ್

ಕುಂದಗೋಳ : ಜ್ಞಾನಜ್ಯೋತಿ ಕಾನ್ವೆಂಟ್ ಮತ್ತು ಕಿರಿಯ ಪ್ರಾಥಮಿಕ ಶಾಲೆ ಕಮಡೊಳ್ಳಿ ಹಾಗೂ ಗುಡ್ ಲಕ್ ಕಾನ್ವೆಂಟ್ ಮತ್ತು ಕಿರಿಯ ಪ್ರಾಥಮಿಕ ಶಾಲೆ ಹಿರೇಗುಂಜಳ ಎರಡು ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವಂತಹ ಕರ್ನಾಟಕ ಸರ್ಕಾರದ ಸುವರ್ಣ ಸೌಧದ ಕಲಾಪದ ವೀಕ್ಷಣೆಯನ್ನು ಮಾಡಲು ಕುಂದಗೋಳ ಶಾಸಕ ಎಮ್. ಆರ್.ಪಾಟೀಲ್ ಮತ್ತೊಮ್ಮೆ ಮಕ್ಕಳಿಗೆ ಅನುಕೂಲ ಕಲ್ಪಿಸಿದ್ದಾರೆ. 

ಹೌದು ! ಕುಂದಗೋಳ ತಾಲೂಕಿನ ವಿವಿಧ ಹಳ್ಳಿ ಹಾಗೂ ಪಟ್ಟಣದಿಂದ ಬೆಳಗಾವಿಗೆ ತೆರಳಿದ ಮಕ್ಕಳಿಗೆ ಶಾಸಕ ಎಮ್.ಆರ್.ಪಾಟೀಲ್ ಕಲಾಪ ವೀಕ್ಷಣೆಗಾಗಿ ಸಕಲ ವ್ಯವಸ್ಥೆಯನ್ನು ಕಲ್ಪಿಸಿ ಬಾಲ್ಯದಲ್ಲಿ ರಾಜಕೀಯ ಜ್ಞಾನ ತಿಳಿಯಲು ಅವಕಾಶ ಮಾಡಿಕೊಟ್ಟಿದ್ದಾರೆ. 

ಈ ಸಂದರ್ಭದಲ್ಲಿ ರೇಣುಕಾದೇವಿ ವಿದ್ಯಾ ಸಂಸ್ಥೆ ಕಮಡೊಳ್ಳಿ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಂ.ನಾವಳ್ಳಿ ಸಂಸ್ಥೆಯ ಮುಖ್ಯೋಪಾಧ್ಯಾಯರು ಹಾಗೂ ಗುಡ್ ಲಕ್ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳಾದ ಹುತ್ತನಗೌಡ ತೆಂಬದಮನಿ ಸರ್ ಗುಡ್ ಲಕ್ ಸಂಸ್ಥೆಯ ಮುಖ್ಯೋಪಾಧ್ಯಾಯರದ ಪರಿಮಳ ತೆಂಬದಮನಿ, ಸಂಸ್ಥೆಯ ಶಿಕ್ಷಕರಾದ ಪ್ರಕಾಶಗೌಡ ತೆಂಬದಮನಿ ಮತ್ತು ಸಂಸ್ಥೆಯ ಎಲ್ಲ ಗುರು ಮಾತೆಯರು ಸಿಬ್ಬಂದಿ ವರ್ಗ ಸದಲ್ಲಿ ನಡೆಯುತ್ತಿರುವ ಕಲಾಪವನ್ನು ವೀಕ್ಷಿಸಿ ಸಂತಸ ಪಟ್ಟರು