ಬೆಂಗಳೂರಿನಲ್ಲಿ ಒಮಿಕ್ರಾನ್ ಸೋಂಕಿತ ವ್ಯಕ್ತಿ ನಾಪತ್ತೆ: ಲ್ಯಾಬ್ ಸಿಬ್ಬಂದಿ ಎಡವಟ್ಟು ಎಕ್ಸ್ ಕ್ಲೂಸಿವ್ ವರದಿ - ಗಣೇಶ್ ಹೆಗಡೆ

ಬೆಂಗಳೂರಿನಲ್ಲಿ ಒಮಿಕ್ರಾನ್ ಸೋಂಕಿತ ವ್ಯಕ್ತಿ ನಾಪತ್ತೆ: ಲ್ಯಾಬ್ ಸಿಬ್ಬಂದಿ ಎಡವಟ್ಟು ಎಕ್ಸ್ ಕ್ಲೂಸಿವ್ ವರದಿ - ಗಣೇಶ್ ಹೆಗಡೆ

ಬೆಂಗಳೂರು:ಖಾಸಗಿ ಲ್ಯಾಬ್ ಎಡವಟ್ಟಿನಿಂದ ಇಡೀ ಬೆಂಗಳೂರು ಆತಂಕ ಎದುರಾಗಿದೆ.‌ ಕಾರಣ ಟೆಸ್ಟಿಂಗ್ ಬಂದಿರೋ ವ್ಯಕ್ತಿಗೆ ಡೇಟಾ ಕಲೆಕ್ಟ್ ಮಾಡದೇ ಬಿಟ್ಟಿರೋ ಲ್ಯಾಬ್ ನಿಂದ ಭೀತಿ ಎದುರಾಗಿದೆ. ಹೌದು.. ಡಿಸೆಂಬರ್ 28ಕ್ಕೆ ಖಾಸಗಿ ಲ್ಯಾಬ್ ನಲ್ಲಿ 22 ವರ್ಷದ ವ್ಯಕ್ತಿ ಲ್ಯಾಬ್ ನಲ್ಲಿ ಟೆಸ್ಟಿಂಗ್ ಮಾಡಿಸಿ ಕೊಂಡಿದ್ದಾರೆ. 29 ಡಿಸೆಂಬರ್ ವರದಿ ಬಂದಿದ್ದು, ಕೊವೀಡ್ ಪಾಸಿಟಿವ್ ದೃಢಪಟ್ಟಿದೆ. ಅಲ್ಲದೆ ಜಿನೋಮ್ ಸಿಕ್ವೇನ್ಸ್ ನಿಂದ ಬಂದ ವರದಿಯಲ್ಲಿ ಒಮಿಕ್ರಾನ್ ಕೂಡಾ ಆ ವ್ಯಕ್ತಿ ದೃಢವಾಗಿದೆ. ವಿಪರ್ಯಾಸವೆಂದರೆ ಆ ಹುಡುಗನ ವೈಯಕ್ತಿಕ ಡೇಟಾ ಲ್ಯಾಬ್ ಬಳಿ ಇಲ್ಲ. ಆತ ಎಲ್ಲಿದ್ದಾನೆ, ಅವರ ಪ್ರೈಮರಿ ಕಾಂಟ್ಯಾಕ್ಟ್ ಎಷ್ಟು..? ಆ ವ್ಯಕ್ತಿಯ ಆರೋಗ್ಯ ಹೇಗಿದೆ ಯಾವುದರ ಮಾಹಿತಿ ಲ್ಯಾಬ್ ಬಳಿ ಇಲ್ಲ.. ಈ ಬಗ್ಗೆ ಪೊಲೀಸ್ರಿಗೆ ಆರೋಗ್ಯ ಇಲಾಖೆ ದೂರು ನೀಡಿದೆ.ವ್ಯಕ್ತಿಯ ಟ್ರೇಸ್ ಔಟ್ ಮಾಡಿಕೊಡುವಂತೆ ಮನವಿ ಮಾಡಿದೆ.