ಹಿಜಾಬ್ ವಿವಾದ : ಸುಪ್ರೀಂ ಮೆಟ್ಟಿಲೇರಿದ ವಿದ್ಯಾರ್ಥಿನಿಯರಿಗೆ ನಿರಾಶೆ : ಹೋಳಿ ಬಳಿಕ ವಿಚಾರಣೆ ಎಂದ ಕೋರ್ಟ್

ಹಿಜಾಬ್ ವಿವಾದ :  ಸುಪ್ರೀಂ ಮೆಟ್ಟಿಲೇರಿದ ವಿದ್ಯಾರ್ಥಿನಿಯರಿಗೆ ನಿರಾಶೆ : ಹೋಳಿ ಬಳಿಕ ವಿಚಾರಣೆ ಎಂದ ಕೋರ್ಟ್

ನವದೆಹಲಿ : ಮಾ.15 ರಂದು ಕರ್ನಾಟಕ ಹೈಕೋರ್ಟ್ ಶಾಲಾ-ಕಾಲೇಜುಗಳಿಗೆ ಹಿಜಾಬ್ ಧರಿಸಿ ಬರುವಂತಿಲ್ಲ ಎಂದು ಐತಿಹಾಸಿಕ ತೀರ್ಪು ಪ್ರಕಟಿಸಿದೆ. ಸದ್ಯ ಈ ತೀರ್ಪಿನಿಂದ ಅಸಮಾಧಾನಗೊಂಡ ಹಲವರು ಸುಪ್ರೀಂ ಕದ ತಟ್ಟಿದ್ದಾರೆ. ಮಾತ್ರವಲ್ಲದೆ ತುರ್ತು ಪ್ರಕರಣ ಎಂದು ಪರಿಗಣಿಸುವಂತೆ ಮನವಿ ಮಾಡಿದ್ದಾರೆ. ಆದರೆ ಸುಪ್ರೀಂ ಈ ಮನವಿಯನ್ನು ನಿರಾಕರಿಸಿದೆ. ಹೌದು ಹೈ ಕೋರ್ಟ್ ಆದೇಶ ತಿರಸ್ಕರಿಸಿ ಸುಪ್ರೀಂ ಕೋರ್ಟ್ ಮೊರೆ ಹೋದ ಉಡುಪಿಯ ವಿದ್ಯಾರ್ಥಿನಿಯರ ಪರವಾಗಿ, ವಕೀಲ ಸಂಜಯ್ ಹೆಗ್ಡೆ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಪ್ರಸ್ತಾಪಿಸಿ, ಪರೀಕ್ಷಾ ದೃಷ್ಟಿಯಿಂದ ಈ ಪ್ರಕರಣವನ್ನು ತುರ್ತು ಪ್ರಕರಣ ಎಂದು ಪರಿಗಣಿಸುವಂತೆ ಮನವಿ ಮಾಡಿದ್ದಾರೆ. ಆದರೆ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್ ನಿರಾಕರಿಸಿದೆ. ಹೋಳಿ ಹಬ್ಬದ ನಂತರ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ಸ್ಪಷ್ಟಪಡಿಸಿದೆ.