ಬೆಂಗಳೂರು : ಬಿಜೆಪಿಯ 18 ಶಾಸಕರ ಅಮಾನತು ಹಿಂಪಡೆಯರಿ ಎಂದು ಸ್ಪೀಕರ್‌ಗೆ ಪತ್ರ ಬರೆದ ಯತ್ನಾಳ್..!

ಬೆಂಗಳೂರು : ವಿಧಾನಸಭೆಯಿಂದ ಅಮಾನತು ಆದ 18 ಬಿಜೆಪಿ ಶಾಸಕರನ್ನ ವಾಪಸಾತಿ ಮಾಡಿಕೊಳುವಂತೆ ಸ್ಪೀಕರ್ ಖಾದರ್‌ಗೆ ಬಿಜೆಪಿಯಿಂದ ಉಚ್ಛಾಟನೆಯಾಗಿರುವ ಬಸನಗೌಡ ಪಾಟೀಲ್ ಯತ್ನಾಳ್ ಪತ್ರ ಬರೆದಿದ್ದಾರೆ.
4% ಮುಸ್ಲಿಂ ಮೀಸಲಾತಿ ವಿಚಾರವಾಗಿ ಹೋರಾಟ ಮಾಡಿದ್ದ ಶಾಸಕರು ಅವರೆಲ್ಲ, ವಿರೋಧ ಪಕ್ಷದ ಕೆಲಸವೇ ಜನರ ಪರವಾಗಿ ಸದನದಲ್ಲಿ ಧ್ವನಿ ಎತ್ತುವುದು. ಈ 18 ಶಾಸಕರಲ್ಲಿ ಕೆಲ ಶಾಸಕರು ಮೊದಲ ಬಾರಿಗೆ ಆಯ್ಕೆಯಾದವರು, ಕೆಲ ದಿನಗಳಿಂದ ಕೆಲ ಶಾಸಕರು ಅಮಾನತು ಆಗಿರುವ ಕಾರಣ ಒತ್ತಡದಲ್ಲಿದ್ದಾರೆ. ಅದರಿಂದ ಅಮಾನತಾದ ಶಾಸಕರನ್ನ ಮರುಪರಿಗಣಿಸಬೇಕೆಂದು ಪತ್ರ ಬರೆದಿದ್ದಾರೆ.
ಪಕ್ಷದಿಂದ ಉಚ್ಚಾಟನೆಯಾದ್ರೂ ಬಿಜೆಪಿ ಶಾಸಕರ ಮೇಲೆ ಯತ್ನಾಳ್ ಗೆ ಒಲವು ತೋರಿಸಿ ಸ್ಪೀಕರ್ ಯು.ಟಿ ಖಾದರ್ ಗೆ ಯತ್ನಾಳ್ ಪತ್ರ ಬರೆದಿದ್ದಾರೆ.
ಆ 18 ಶಾಸಕರನ್ನ ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾದ್ರಾ ಯತ್ನಾಳ್? ಎಂಬ ಚರ್ಚೆಯೂ ಪಕ್ಷದ ಪಡಸಾಲೆಯಲ್ಲಿ ನಡೆಯುತ್ತಿದೆ.