ಬೆಂಗಳೂರು: ನಾಳೆ ಜೂನ್ 25ರಿಂದ ಜೂನ್ 29ರವರೆಗು ಯುಜಿಸಿಇಟಿ - 2024 ದಾಖಲೆಗಳ ಆಫ್ ಲೈನ್ ಪರಿಶೀಲನೆ

ಬೆಂಗಳೂರು: ನಾಳೆ ಜೂನ್ 25ರಿಂದ ಜೂನ್ 29ರವರೆಗು ಯುಜಿಸಿಇಟಿ - 2024 ದಾಖಲೆಗಳ ಆಫ್ ಲೈನ್ ಪರಿಶೀಲನೆ

ಬೆಂಗಳೂರು: ಯುಜಿಸಿಇಟಿ-2024 ಆನ್‌ಲೈನ್ ಅರ್ಜಿಯಲ್ಲಿ ಅರ್ಹತ ಕಂಡಿರುವ ಬಿ.ಸಿ.ಡಿ, ಐ,ಜೆ,ಕೆ, ಎಲ್,ಎಂ,ಎನ್, ಜೆಡ್ ಕ್ಲಾಸ್‌ಗಳನ್ನು ಕ್ಲೀನ್ ಮಾಡಿರುವ ಹಾಗೂ ರಾಂಕ್ ಪಡೆದಿರುವ ಅಭ್ಯರ್ಥಿಗಳಿಗೆ ನಾಳೆ ಅಂದ್ರೆ ಜೂನ್ 25ರಿಂದ 29 ರ ವರೆಗೂ ಬೆಂಗಳೂರಿನ ಮಲ್ಲೇಶ್ವರಂನ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಚೇರಿಯಲ್ಲಿ ಆಫ್‌ಲೈನ್ ದಾಖಲಾತಿ ಪರಿಶೀಲನೆ ನಡೆಯಲಿದೆ. 

ಈ ಬಗ್ಗೆ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ಮಾಹಿತಿ ನೀಡಿದ್ದು, ಸಂಬಂಧಿಸಿದ ಅಭ್ಯರ್ಥಿಗಳಿಗೆ ಕುದ್ದು ಆಜಾರಾಗಲು ಸೂಚಿಸಿದ್ದಾರೆ. ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಯೋಗ ಮತ್ತು ನ್ಯಾಚುರೋಪತಿ , ಪಶು ವೈದ್ಯಕೀಯ ಮತ್ತು ಪಶು ಸಂಗೋಪನೆ, ಕೃಷಿ ವಿಜ್ಞಾನ ಕೋರ್ಸ್‌ಗಳು ಸೇರಿದಂತೆ ಬಿ ಫಾರ್ಮ್ ಎರಡನೇ ವರ್ಷದ ಬಿ ಫಾರಂ ಮತ್ತು ಫೌಂಡಿ ಕೋರ್ಸ್ ಗಳ ಪ್ರವೇಶಕ್ಕೆ ಇದು ಅನ್ವಯವಾಗಲಿದೆ. ಜೊತೆಗೆ ಬೈ ಅರ್ಹತಕಂಡಿಕೆಯನ್ನು ಕ್ಲೀನ್ ಮಾಡಿರುವ ಅಭ್ಯರ್ಥಿಗಳು ದಾಖಲೆಗಳ ಪರಿಶೀಲನೆಗೆ ಹಾಜರಾಗುವ ಅಗತ್ಯವಿಲ್ಲ ಎಂದು KEA ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ಅವರು ತಿಳಿಸಿದ್ದಾರೆ. 

ಇನ್ನು ವೇಳಾಪಟ್ಟಿ ನೋಡುವುದಾದರೆ ವಿದ್ಯಾರ್ಥಿಗಳ ರಾಂಕ್ ಆಧಾರದ ಮೇಲೆ ವೇಳಾಪಟ್ಟಿ ಸಿಟ್ ಮಾಡಲಾಗಿದೆ. ಬೆಳಿಗ್ಗೆ ಒಂಬತ್ತು ಗಂಟೆಯಿಂದ ಆಫ್ಲೈನ್ ದಾಖಲೆಗಳ ಪರಿಶೀಲನೆ ನಡೆಯಲಿದ್ದು ಮೂರು ಭಾಗಗಳನ್ನಾಗಿ ರಾಂಕ್ ಆಧಾರದ ಮೇಲೆ ವೇಳಾಪಟ್ಟಿ ಮಾಡಲಾಗಿದೆ. ಇನ್ನು ಪರಿಶೀಲನೆಗೆ ಸಲ್ಲಿಸಬೇಕಾದ ಮೂಲ ದಾಖಲೆಗಳ ವಿವರವನ್ನು ಪ್ರಾಧಿಕಾರದ ವೆಬ್ ಸೈಟ್ ನಲ್ಲಿರುವ ಈ ಮಾಹಿತಿ ಪುಸ್ತಕದಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ಸೂಕ್ತವಾದ ದಾಖಲೆಗಳೊಂದಿಗೆ ಒಂದು ಜೆರಾಕ್ಸ್ ಪ್ರತಿಗಳೊಂದಿಗೆ ಹಾಜರಾಗಬೇಕೆಂದು ತಿಳಿಸಲಾಗಿದೆ. 

ಇನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ದಿಢೀರ್ ದಾಖಲೆಗಳ ಪರಿಶೀಲನೆ ವಿಚಾರ ಕೇಳಿದ್ದು ಕೆಲ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊದಲೇ ಈ ಬಾರಿ ಸಿಇಟಿಯಲ್ಲಿ ನಾನ ವಿಘ್ನಗಳು ಕಂಡಿದ್ದು, ಸಿಇಟಿ ಪರೀಕ್ಷಾ ಫಲಿತಾಂಶ ಕೂಡ ದಿಡೀರನೆ ಪ್ರಕಟಿಸಲಾಗಿತ್ತು. ಇದೀಗ ಆಫ್‌ಲೈನ್ ದಾಖಲೆಗಳ ಪರಿಶೀಲನೆ ಕೂಡ ಒಂದೆರಡು ದಿನಗಳ ಅಂತರದಲ್ಲಿ ಹೇಳಿರುವುದು ಕೆಲ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಅಸಮಾಧಾನ ಮೂಡಿಸದೆ.