ಬೆಂಗಳೂರು: ನಾಳೆಯಿಂದ ಹತ್ತು ದಿನ ಎಸ್ಕಾಂ ಆನ್‌ಲೈನ್‌ ಸೇವೆ ಇಲ್ಲ!

ಬೆಂಗಳೂರು: ನಾಳೆಯಿಂದ ಹತ್ತು ದಿನ ಎಸ್ಕಾಂ ಆನ್‌ಲೈನ್‌ ಸೇವೆ ಇಲ್ಲ!

ಬೆಂಗಳೂರು: ಎಸ್ಕಾಂ ವ್ಯಾಪ್ತಿಯ‌ ಗ್ರಾಹಕರು ನಾಳಯಿಂದ ವಿದ್ಯುತ್‌ ಕಚೇರಿಯ ಮುಂದೆ ಸರದಿ ಸಾಲಿನಲ್ಲಿ ನಿಲ್ಲುವುದು ಅನಿವಾರ್ಯವಾಗಲಿದೆ. ಮಾರ್ಚ್ 10ರಿಂದ 19ರವರೆಗೆ ಆನ್‌ಲೈನ್‌ ಸೇವೆಗಳನ್ನು ಸ್ಥಗಿತಗೊಳಿಸುವುದಾಗಿ ಎಸ್ಕಾಂ ಪ್ರಕಟಣೆಯ ಮೂಲಕ ತಿಳಿಸಿದೆ. 

ವಿದ್ಯುತ್‌ ಬಿಲ್‌ ಪಾವತಿ, ವಿದ್ಯುತ್‌ ಕುಂದುಕೊರತೆ ದೂರು ಹಾಗೂ ವಿದ್ಯುತ್‌ ಹೊಸ ಸಂಪರ್ಕಕ್ಕೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಗಳನ್ನು ನಾಳೆಯಿಂದ ಆನ್‌ ಲೈನ್‌ ಮೂಲಕ ಸಲ್ಲಿಸಲು ಸಾಧ್ಯವಿಲ್ಲ. ಎಸ್ಕಾಂ ವೆಬ್‌ ಸೈಟ್‌ ನಲ್ಲಿ ತಾಂತ್ರಿಕವಾಗಿ ದುರಸ್ತಿ ಪಡಿಸುವ ಕಾರ್ಯಕ್ಕೆ ವಿದ್ಯುತ್‌ ಕಂಪನಿ ಮುಂದಾಗಿರುವ ಕಾರಣ ಮಾರ್ಚ್ 19ರವರೆಗೆ ಆನ್‌ಲೈನ್‌ ಸೇವೆಗಳು ಸ್ಥಗಿತಗೊಳ್ಳಲಿವೆ. 

ಗ್ರಾಹಕರಿಗೆ ಉಂಟಾಗಲಿರುವ ಅನಾನುಕೂಲಕ್ಕೆ ವಿಷಾದ ವ್ಯಕ್ತಪಡಿಸಿರುವ ಎಸ್ಕಾಂ ಮಾರ್ಚ್ 20ರಿಂದ ಆನ್‌ಲೈನ್‌ ಸೇವೆಗಳು ಎಂದಿನಂತೆಯೇ ಮುಂದುವರೆಯುವುದಾಗಿ ತಿಳಿಸಿದೆ.