ಐಪಿಎಲ್‌ನಲ್ಲಿ ದಾಖಲೆ ಬರೆದ ಡೇವಿಡ್‌ ವಾರ್ನರ್

ಐಪಿಎಲ್‌ನಲ್ಲಿ ದಾಖಲೆ ಬರೆದ ಡೇವಿಡ್‌ ವಾರ್ನರ್

ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ಸ್ಟ್ಯಾಂಡ್-ಇನ್ ನಾಯಕ ಡೇವಿಡ್ ವಾರ್ನರ್ ಮಂಗಳವಾರ ಐಪಿಎಲ್‌ನಲ್ಲಿ 600 ಬೌಂಡರಿಗಳನ್ನು ಸಿಡಿಸಿದ ಮೊದಲ ವಿದೇಶಿ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 

 

36 ವರ್ಷದ ಡೇವಿಡ್ ವಾರ್ನರ್ ಅವರು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 600 ಬೌಂಡರಿ ದಾಖಲೆಯನ್ನು ತಲುಪಿದರು. ಐಪಿಎಲ್ ಇತಿಹಾಸದಲ್ಲಿ ಅರಿ ಹೆಚ್ಚು ಬೌಂಡರಿ ಬಾರಿಸಿದ ದಾಖಲೆಯನ್ನು ಪಂಜಾಬ್ ಕಿಂಗ್ಸ್‌ ನಾಯಕ ಶಿಖರ್ ಧವನ್ ಹೊಂದಿದ್ದಾರೆ. ಅವರು 208 ಐಪಿಎಲ್ ಇನ್ನಿಂಗ್ಸ್‌ಗಳಲ್ಲಿ 728 ಬೌಂಡರಿ ಬಾರಿಸಿದ್ದಾರೆ. ಶಿಖರ್ ಧವನ್ ಅವರ ನಂತರ ಸ್ಥಾನದಲ್ಲಿ ಡೇವಿಡ್ ವಾರ್ನರ್‌ ಇದ್ದಾರೆ.