ದ್ವಿತೀಯ ಪಿಯು ಪರೀಕ್ಷೆ -3 ಬರೆಯುವ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್

ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆ- 3 ಬರೆಯುವ ವಿದ್ಯಾರ್ಥಿಗಳಿಗೆ ಕೆಎಸ್ಆರ್‌ಟಿಸಿ ಗುಡ್ ನ್ಯೂಸ್ ನೀಡಿದೆ. ಜೂನ್ 24 ರಿಂದ ಜುಲೈ 5 ರವರೆಗೆ ಪಿಯುಸಿ ಪರೀಕ್ಷೆ- 3 ನಡೆಯಲಿದ್ದು. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆಎಸ್ಆರ್‌ಟಿಸಿ ಉಚಿತ ಸಾರಿಗೆ ಸೇವೆ ಕಲ್ಪಿಸಿದೆ.
ವಿದ್ಯಾರ್ಥಿಗಳ ವಾಸಸ್ಥಳದಿಂದ ಪರೀಕ್ಷಾ ಕೇಂದ್ರದವರೆಗೂ ಬಸ್ ವ್ಯವಸ್ಥೆ ಇದ್ದು, ಪರೀಕ್ಷಾ ಹಾಲ್ ಟಿಕೆಟ್ ತೋರಿಸಿ ಸಾರಿಗೆ ಬಸ್ ಗಳಲ್ಲಿ ವಿದ್ಯಾರ್ಥಿಗಳು ಉಚಿತ ಸಂಚಾರ ಮಾಡಬಹುದಾಗಿದೆ.