ODI WC | INDvsAFG: ರೋಹಿತ್ ಶತಕ, ವಿರಾಟ್ ಫಿಫ್ಟಿ - ಅಫ್ಘಾನ್ ವಿರುದ್ಧ ಭಾರತಕ್ಕೆ ಸುಲಭ ಜಯ

ODI WC | INDvsAFG: ರೋಹಿತ್ ಶತಕ, ವಿರಾಟ್ ಫಿಫ್ಟಿ - ಅಫ್ಘಾನ್ ವಿರುದ್ಧ ಭಾರತಕ್ಕೆ ಸುಲಭ ಜಯ

ನವದೆಹಲಿ: ರೋಹಿತ್ ಶರ್ಮಾ ಶತಕದ ಬೊಂಬಾಟ ಆಟ ಹಾಗೂ ವಿರಾಟ್ ಕೊಹ್ಲಿ ಅರ್ಧಶತಕದಿಂದ ಭಾರತವು ಅಫ್ಘಾನಿಸ್ತಾನದ ವಿರುದ್ಧ 8 ವಿಕೆಟ್‌ಗಳಿಂದ ಗೆಲವು ದಾಖಲಿಸಿದೆ. 

 

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಏಕದಿನ ವಿಶ್ವಕಪ್ 2023ರ ಭಾಗವಾಗಿ ನಡೆಯುತ್ತಿರುವ 9ನೇ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ‌ಮಾಡಿದ ಅಫ್ಘಾನಿಸ್ತಾನ ತಂಡವು 8 ವಿಕೆಟ್ 272 ರನ್‌ ಗಳಿಸಿತು. ಬಳಿಕ ಬ್ಯಾಟಿಂಗ್ ಮಾಡಿದ ಭಾರತ ತಂಡವು 35 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 273 ರನ್ ಚಚ್ಚಿ ಗೆದ್ದು ಬೀಗಿದೆ. 

ಭಾರತ ತಂಡದ ಪರ ರೋಹಿತ್ ಶರ್ಮಾ 131 ರನ್, ವಿರಾಟ್ ಕೊಹ್ಲಿ 55* ರನ್, ಇಶಾನ್ ಕಿಶನ್ 47 ರನ್ ಹಾಗೂ ಶ್ರೇಯಸ್ ಅಯ್ಯರ್ 25 * ರನ್ ಗಳಿಸಿದರು. ಇದಕ್ಕೂ ಮುನ್ನ ಭಾರತದ ಪರ ಜಸ್ಪ್ರೀತ್ ಬುಮ್ರಾ 4 ವಿಕೆಟ್ ಕಿತ್ತು ಮಿಂಚಿದರು.