ಬೆಂಗಳೂರು : ಒಳ ಮೀಸಲಾತಿ ಅವಧಿ ಮೇ 25ಕ್ಕೆ ವಿಸ್ತರಣೆ - ನಾಗಮೋಹನ್ ದಾಸ್

ಬೆಂಗಳೂರು : ಒಳ ಮೀಸಲಾತಿ ಅವಧಿ ಮೇ 25ಕ್ಕೆ ವಿಸ್ತರಣೆ - ನಾಗಮೋಹನ್ ದಾಸ್

ಬೆಂಗಳೂರು: ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸಲು ನಡೆಸುತ್ತಿರುವ ಜಾತಿಯ ಸಮೀಕ್ಷೆಯನ್ನ ಮೇ 25 ರವರೆಗೂ ವಿಸ್ತರಿಸಲಾಗಿದೆ ಎಂದು ಆಯೋಗದ ಅಧ್ಯಕ್ಷ ನಿವೃತ್ತ ನ್ಯಾ. ಹೆಚ್ ಎನ್ ನಾಗಮೋಹನ್ ದಾಸ್ ಹೇಳಿದ್ದಾರೆ. ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಸಮೀಕ್ಷೆಯನ್ನ ಇದೇ ತಿಂಗಳ 25ರ ವರೆಗೂ ವಿಸ್ತರಿಸಲಾಗಿದೆ ಈ ಮೊದಲು 17 ರತನಕ ಸಮೀಕ್ಷೆ ಮಾಡಲು ನಿಗದಿ ಪಡಿಸಲಾಗಿತ್ತು. ಆದ್ರೆ ಇದೀಗ 25 ರವರೆಗೂ ಮನೆ ಮನೆಗೂ ಸಮೀಕ್ಷೆ ನಡೆಸಲು ನಿರ್ಧಾರಿಸಿದ್ದೇವೆ ಎಂದು ತಿಳಿಸಿದರು. ಸಮೀಕ್ಷೆ ಕಾರ್ಯ ಈಗಾಗಲೇ ಶೇ. 70ರಷ್ಟು ಮುಗಿದಿದ್ದು, ಇನ್ನೂ 30 ರಷ್ಟು ಸಮೀಕ್ಷೆ ಮಾತ್ರ ಬಾಕಿ ಇದೆ. ಹೀಗಾಗಿಯೇ ಈ ಸಮೀಕ್ಷಾ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದರು. 

ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ 101 ಉಪ ಜಾತಿಗಳಿದ್ದು, 2011ರ ಜಣಗಣತಿಯಲ್ಲಿ ಆದಿ ಆಂಧ್ರ, ಆದಿ ದ್ರಾವಿಡ, ಆದಿ ಕರ್ನಾ ಎಂದು ಕೆಲವರು ಬರೆಸಿದ್ದು ಇದರಲ್ಲಿ ಅನೇಕ ಉಪಜಾತಿಗಳು ಸೇರಿಕೊಂಡಿವೆ ಹೀಗಾಗಿ ಪರಿಶಿಷ್ಟ ಜಾತಿಗಳ ವೈಜ್ಞಾನಿಕ ವರ್ಗೀಕರಣಕ್ಕೆ ಅಡ್ಡಿಯಾಗಿತ್ತು. ನಾವು ಸರ್ವೇ ಮಾಡಿದ ಸಂದರ್ಭದಲ್ಲಿ ಈಗ ಎಲ್ಲ ಮಾಹಿತಿಗಳು ಬರುತ್ತಿವೆ. ಸಮೀಕ್ಷೆಗೆ ವೈಜ್ಞಾನಿಕ ವಿಧಾನವನ್ನು ಅಳವಡಿಸಿಕೊಂಡಿದ್ದೇವೆ ಎಂದು ತಿಳಿಸಿದರು. ಇನ್ನೂ ಈ ಸಮೀಕ್ಷೆ ನಡೆಸುವಾಗ ಸೇಡಂನಲ್ಲಿ ಒರ್ವ ಶಿಕ್ಷಕಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರಿಗೆ ಆಯೋಗದಿಂದ 15 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿದೆ ಎಂದು ತಿಳಿಸಿದರು.