ಪ್ರಶ್ನೆ ಪತ್ರಿಕೆ ಸೋರಿಕೆ : NTA ಮುಖ್ಯಸ್ಥ 'ಸುಬೋಧ್ ಕುಮಾರ್' ವಜಾ...ಪ್ರದೀಪ್ ಸಿಂಗ್ ಖರೋಲಾ ನೇಮಕ

ನವದೆಹಲಿ : ನೀಟ್, ಯುಜಿಸಿ-ನೆಟ್ ವಿವಾದದ ಮಧ್ಯೆಯೇ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಗೆ ನೂತನ ಮಹಾನಿರ್ದೇಶಕರನ್ನಾಗಿ ಪ್ರದೀಪ್ ಸಿಂಗ್ ಖರೋಲಾ ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ನೀಟ್-ಯುಜಿ ಮತ್ತು ಯುಜಿಸಿ-ನೆಟ್ ಪರೀಕ್ಷೆಗಳ ನಿರ್ವಹಣೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಮುಖ್ಯಸ್ಥ ಸುಬೋಧ್‌ಕುಮಾರ್ ಸಿಂಗ್ ಅವರನ್ನು ಇಂದು ಹುದ್ದೆಯಿಂದ ತೆಗೆದು ಹಾಕಲಾಗಿದೆ. ಅವರ ಸ್ಥಾನಕ್ಕೆ ಐಎಎಸ್ ಪ್ರದೀಪ್ ಸಿಂಗ್ ಖರೋಲಾ ಅವರನ್ನ (NTA) ಮಹಾನಿರ್ದೇಶಕರನ್ನಾಗಿ ನೇಮಿಸಲಾಗಿದೆ.
ಪ್ರಶ್ನೆ ಪತ್ರಿಕೆ ಸೋರಿಕೆಯ ಬಗ್ಗೆ ಪ್ರತಿಪಕ್ಷಗಳು ನಿರಂತರವಾಗಿ ಸರ್ಕಾರವನ್ನ ಪ್ರಶ್ನಿಸುತ್ತಿದ್ದವು ಜೊತೆಗೆ ದೇಶಾದ್ಯಂತ ವಿದ್ಯಾರ್ಥಿಗಳು ಪ್ರಟಿಭಟನೆ ನಡೆಸುತ್ತಿದ್ದಾರೆ.