ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳಿಗೆ ಶಾಕ್ ನೀಡಿದ ಎಸಿಬಿ-ಕೇಂದ್ರ ಕಚೇರಿ ಸೇರಿ 27 ಕಡೆ ದಾಳಿ

ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳಿಗೆ ಶಾಕ್ ನೀಡಿದ ಎಸಿಬಿ-ಕೇಂದ್ರ ಕಚೇರಿ ಸೇರಿ 27 ಕಡೆ ದಾಳಿ

ಬೆಂಗಳೂರು: ಶುಕ್ರವಾರ ಪೂಜೆ ಮೂಡ್ ನಲ್ಲಿದ್ದ ಬಿಬಿಎಂಪಿ ಅಧಿಕಾರಿಗಳಿಗೆ ಎಸಿಬಿ ಅಧಿಕಾರಿಗಳು ದರ್ಶನ ಕೊಟ್ಟು ಶಾಕ್ ನೀಡಿದ್ದಾರೆ.‌ಬಿಬಿಎಂಪಿ ಕೇಂದ್ರ ಕಚೇರಿ ಸೇರಿ 27 ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಿಬಿಎಂಪಿಯ ನಗರ ಯೋಜನೆಯ ಉತ್ತರ ಮತ್ತು ದಕ್ಷಿಣ ವಿಭಾಗದ ಕಚೇರಿಗಳ ಮೇಲೆ ದಾಳಿ ನಡೆದಿದ್ದು, ಎಸಿಬಿ ಮುಖ್ಯಸ್ಥ ಸೀಮಂತ್ ಕುಮಾರ್ ಸಿಂಗ್ ಮಾರ್ಗದರ್ಶನದಲ್ಲಿ ನಾಲ್ವರು ಎಸ್ ಪಿಗಳ ನೇತ್ರತ್ವದಲ್ಲಿ ದಾಳಿ ನಡೆದಿದೆ. ಇನ್ನೂರಕ್ಕು ಹೆಚ್ಚು ಅಧಿಕಾರಿಗಳಿಂದ ಏಕಕಾಲಕ್ಕೆ ನಡೆದ ದಾಳಿ ಇದಾಗಿದ್ದು, ‌ಬಿಡಿಎ ದಾಳಿ ನಂತರ‌ ಇದೇ ದೊಡ್ಡ ದಾಳಿಯಾಗಿದೆ. ಟೌನ್ ಪ್ಲಾನಿಂಗ್ ಮೇಲೆ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದು ಈ ಕಚೇರಿ ಮೇಲೂ ದಾಳಿ ಮಾಡಲಾಗಿದೆ. ವಲಯವಾರು ಇರುವ ಟೌನ್ ಪ್ಲಾನಿಂಗ್ ಕಚೇರಿಗಳ ಮೇಲೆ‌ ಏಕಕಾಲಕ್ಕೆ ದಾಳಿ ನಡೆದಿದ್ದು ಎಂಟೂ ವಲಯಗಳಲ್ಲಿರೋ ನಗರ ಯೋಜನೆ ಕಚೇರಿಗಳ ಮೇಲೂ ದಾಳಿಯಾಗಿದೆ.