ಹುಬ್ಬಳ್ಳಿ: ಕೊನೆಗೂ ಹುಬ್ಬಳ್ಳಿಗೆ ಬರುತ್ತಿದೆ ಎಫ್ ಎಸ್ ಎಲ್ ಲ್ಯಾಬ್

ವರದಿ: ಈರಣ್ಣ ವಾಲಿಕಾರ ಹುಬ್ಬಳ್ಳಿ: ಛೋಟಾ ಮುಂಬಯಿ ಹುಬ್ಬಳ್ಳಿಯಲ್ಲಿ ಕ್ರೈಂ ಪ್ರಕರಣಗಳ ತನಿಖೆ ಹಾಗೂ ನ್ಯಾಯದಾನ ತ್ವರಿತಗತಿಯಲ್ಲಿ ನಡೆಯಬೇಕು ಎನ್ನುವ ಕಾರಣಕ್ಕೆ, ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್) ಕಾರ್ಯ ಭರದಿಂದ ಸಾಗಿವೆ, ಸಧ್ಯ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕಟ್ಟಡ ಸಿದ್ದಗೊಳ್ಳುತ್ತಿದೆ. ಬೆಂಗಳೂರು ಲ್ಯಾಬ್ ನ ಹೊರತು ಪಡಿಸಿದರೆ ಪ್ರಮುಖ ವಿಭಾಗಗಳು ಇಲ್ಲಿ ಕಾರ್ಯನಿರ್ವಹಿಸಲಿವೆ.ಸಧ್ಯ ಈ ವಲಯಕ್ಕೆ ಮೊದಲ ಕೊಡುಗೆಯಾಗಿದೆ. ಕೊಲೆ, ದರೋಡೆ, ಸುಲಿಗೆ, ಅತ್ಯಾಚಾರ ಸೇರಿದಂತೆ ಹಲವು ಪ್ರಕರಣಗಳಲ್ಲಿ ಸಂಗ್ರಹಿಸಿದ ಸಾಕ್ಷ್ಯದ ವೈಜ್ಞಾನಿಕ ವರದಿ ಪಡೆಯೋಕೆ ಲ್ಯಾಬ್ ನ ಅಗತ್ಯತೆ ಹೆಚ್ಚು. ಆದರೆ ಈ ಭಾಗದಲ್ಲಿ ಕೇವಲ ಎರಡು ಪ್ರಯೋಗಾಲಯಗಳು ಇರುವದರಿಂದ ಸಹಜವಾಗೇ ಒತ್ತಡ ಹೆಚ್ಚಿತ್ತು. ಇದರಿಂದಾಗಿ ಸಕಾಲದಲ್ಲಿ ಫೊರೆನ್ಸಿಕ್ ವರದಿ ತಲುಪದೆ ಅದೆಷ್ಟೋ ತನಿಖೆಗಳು ವಿಳಂಬವಾಗಿದ್ದವು. ಕಳೆದ ಮೂರು ವರ್ಷದ ಹಿಂದೆ ಹುಬ್ಬಳ್ಳಿಯ ಗೋಕುಲ್ ರೋಡ್ ನಲ್ಲಿ ನಡೆದ ಶೂಟೌಟ್ ಪ್ರಕರಣದಲ್ಲಿ ರಿಪೋರ್ಟ್ ಬರೋದೆ ತಡವಾಯಿತು ಅಷ್ಟರಲ್ಲಿ ಆರೋಪಿ ರಾಜ್ಯ ಬಿಟ್ಟು ಏಸ್ಕೇಪ್ ಆಗಿದ್ದ. ಈ ರೀತಿ ಪ್ರಕರಣಗಳು ಪುನಾರವರ್ತನೆ ಆಗಬಾರದೆಂದು ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮೀಷನರೇಟ್ ಘಟಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿತ್ತು. ಯಾಕೆಂದ್ರೆ ನ್ಯಾಯಕಯದಲ್ಲಿಯೂ ಕೆಲವೊಮ್ಮೆ ಸರಿಯಾದ ಪೋರೆನ್ಸಿಕ್ ರಿಪೋರ್ಟ್ ಇಲ್ಲದೆ ಖಾಕಿ ಪಡೆ ಕಂಗಾಲಾದ ಉದಾಹರಣೆ ಇವೆ. ಹೀಗಾಗೇ ಕಳೆದ ಆರು ತಿಂಗಳ ಹಿಂದೆ ಇದಕ್ಕೆ ಸಿಎಂ ಬೊಮ್ಮಾಯಿ ಅಸ್ತು ಎಂದಿದ್ರು. ಸಧ್ಯ ಕೆಲಸ ಭರದಿಂದ ಸಾಗಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಕಾರ್ಯನಿವರ್ಹಸಲಿದೆ. ಇದಕ್ಕಾಗಿಯೇ ಈ ಭಾಗದ ಪ್ರಯೋಗಾಲಯದಲ್ಲಿರುವ ವಿಭಾಗಗಳನ್ನು ಹೊರತಪಡಿಸಿ ಹಾಗೂ ಬೆಂಗಳೂರಿನ ಪ್ರಯೋಗಾಯಲಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವೈಜ್ಞಾನಿಕ ವಿಶ್ಲೇಷಣೆಗೆ ಬರುತ್ತಿರುವ ಪ್ರಕರಣಗಳನ್ನು ಗುರುತಿಸಿ, ಆಯ್ದೆ ಪ್ರಮುಖ ವಿಭಾಗಗಳನ್ನು ಇಲ್ಲಿ ಆರಂಭಿಸಲಾಗುತ್ತಿದೆ. ಒಟ್ಟಿನಲ್ಲಿ ಉತ್ತರ ಕರ್ನಾಟಕ ಸೇರಿದಂತೆ ಇತರೆ ಕೆಲ ಜಿಲ್ಲೆಗಳಿಂದಲೂ ವೈಜ್ಞಾನಿಕ ವಿಶ್ಲೇಷಣೆಗೆ ಪ್ರಕರಣಗಳು ಇಲ್ಲಿಗೆ ಬರಲಿವೆ. ಇನ್ಮೆಲಾದ್ರು ಖಾಕಿ ಪಡೆಯ ತನೀಖೆಗೆ ಈ ಕೇಂದ್ರ ಸಹಕಾರಿಗಾಗಲಿ ಎನ್ನೋದೆ ನಮ್ಮ ಆಶಯ.