IPL 2025ರ ಪುನರಾರಂಭಕ್ಕೆ BCCI ದಿನಾಂಕ ನಿಗದಿ - ಮೇ 17ರಿಂದ ಆರಂಭ, ಜೂನ್ 3ಕ್ಕೆ ಫೈನಲ್

IPL 2025ರ ಪುನರಾರಂಭಕ್ಕೆ BCCI ದಿನಾಂಕ ನಿಗದಿ - ಮೇ 17ರಿಂದ ಆರಂಭ, ಜೂನ್ 3ಕ್ಕೆ ಫೈನಲ್

ನವದೆಹಲಿ: ಭಾರತ-ಪಾಕ್ ಕದನ ವಿರಾಮ ಘೋಷಣೆ ನಂತರ IPL 2025ರ ಇನ್ನುಳಿ ಹಂತವನ್ನು ಪುನರಾರಂಭ ಮಾಡುವುದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಧಿಕೃತವಾಗಿ ಘೋಷಿಸಿದೆ. ಒಟ್ಟು 17 ಪಂದ್ಯಗಳು 6 ಸ್ಥಳಗಳಲ್ಲಿ ಮೇ 17 ರಿಂದ ಆರಂಭವಾಗಲಿದೆ. ಜೂನ್ 3ರಂದು ಭರ್ಜರಿ ಫೈನಲ್ ಪಂದ್ಯದ ಮೂಲಕ IPL ಅಂತ್ಯವಾಗಲಿದೆ. 

ಪರಿಷ್ಕೃತ ವೇಳಾಪಟ್ಟಿಯಲ್ಲಿ ಎರಡು ಡಬಲ್-ಹೆಡರ್‌ಗಳು ಹೊಂದಿದ್ದು, ಅವುಗಳನ್ನು ಎರಡು ಭಾನುವಾರಗಳಲ್ಲಿ ಆಯೋಜಿಸಲಾಗಿದೆ. ಪ್ರೇಕ್ಷಕರು, ಕ್ರಿಕೆಟ್ ಪ್ರೇಮಿಗಳು ರೋಚಕ ಪಂದ್ಯಗಳ ನಿರೀಕ್ಷೆಯಲ್ಲಿದ್ದಾರೆ. 

ಪ್ಲೇಆಫ್ ಹಂತದ ಪಂದ್ಯಗಳು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ: 

ಕ್ವಾಲಿಫೈಯರ್ 1 – ಮೇ 29 

ಎಲಿಮಿನೇಟರ್ – ಮೇ 30 

ಕ್ವಾಲಿಫೈಯರ್ 2 – ಜೂನ್ 1 

ಅಂತಿಮ (ಫೈನಲ್) – ಜೂನ್ 3 

ಪ್ಲೇಆಫ್ ಪಂದ್ಯಗಳ ಸ್ಥಳಗಳ ವಿವರಗಳನ್ನು ಮುಂದಿನ ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ. IPL ಅಭಿಮಾನಿಗಳಲ್ಲಿ ಇದೀಗ ಮತ್ತೊಮ್ಮೆ ಟಿ20 ಕ್ರಿಕೆಟ್ ಉತ್ಸಾಹ ಇಮ್ಮಡಿಯಾಗಿದೆ. ಅದರಂತೆ ತಂಡಗಳು ಉತ್ತಮ ಆಟಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿವೆ.