ಮದ್ಯ ಕುಡಿದು ಸಿಕ್ಕಿಬಿದ್ರೆ 5 ಸಾವಿರ ದಂಡ.!- 2ನೇ ಬಾರಿ ಸಿಕ್ಕಿಬಿದ್ರೆ 1 ವರ್ಷ ಜೈಲು

ಮದ್ಯ ಕುಡಿದು ಸಿಕ್ಕಿಬಿದ್ರೆ 5 ಸಾವಿರ ದಂಡ.!- 2ನೇ ಬಾರಿ ಸಿಕ್ಕಿಬಿದ್ರೆ 1 ವರ್ಷ ಜೈಲು

ಪಾಟ್ನಾ: ರಾಜ್ಯದಲ್ಲಿ ಪ್ರಥಮ ಬಾರಿಗೆ ಮದ್ಯ ಸೇವಿಸಿ ಸಿಕ್ಕಿಬಿದ್ದವರಿಗೆ 2 ರಿಂದ 5 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಬಿಹಾರ ಸರ್ಕಾರ ಘೋಷಿಸಿದೆ. ಮೊದಲ ಬಾರಿಗೆ ಅಪರಾಧಿಗಳು ದಂಡವನ್ನು ಪಾವತಿಸಲು ವಿಫಲವಾದರೆ, ಒಂದು ತಿಂಗಳು ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಎರಡನೇ ಬಾರಿ ಮದ್ಯಪಾನ ಮಾಡಿ ಸಿಕ್ಕಿಬಿದ್ದು ಆರೋಪ ಸಾಬೀತಾದರೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.