ಪ್ರಧಾನಿ ಮೋದಿ, ಭಾರತೀಯರ ಬಗ್ಗೆ ಕೀಳು ಮಟ್ಟದ ಹೇಳಿಕೆ : ಮಾಲ್ಡೀವ್ಸ್‌ನ ಮೂವರು ಸಚಿವರ ಅಮಾನತು

ಪ್ರಧಾನಿ ಮೋದಿ, ಭಾರತೀಯರ ಬಗ್ಗೆ ಕೀಳು ಮಟ್ಟದ ಹೇಳಿಕೆ : ಮಾಲ್ಡೀವ್ಸ್‌ನ ಮೂವರು ಸಚಿವರ ಅಮಾನತು

ನವದೆಹಲಿ : ಪ್ರಧಾನಿ ಮೋದಿ ಮತ್ತು ಭಾರತೀಯರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ತನ್ನ ಮೂವರು ಸಚಿವರನ್ನು ಮಾಲ್ಡೀವ್ಸ್‌ ಸರ್ಕಾರ ಅಮಾನತು ಮಾಡಿದೆ. 

ಹೌದು ಅವಹೇಳನಕಾರಿ ಹೇಳಿಕೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಬಳಿಕ ಮಾಲ್ಡೀವ್ಸ್ ತನ್ನ ಸಚಿವರ ಹೇಳಿಕೆ ತಿರಸ್ಕರಿಸಿದ್ದು ಮಾತ್ರವಲ್ಲದೆ, ಮರಿಯಮ್ ಶಿಯುನಾ ಮತ್ತು ಹಸನ್ ಜಿಹಾನ್ ಸೇರಿ ತನ್ನ ಮೂವರು ಸಚಿವರನ್ನು ಭಾನುವಾರ ಮಾಲ್ಡೀವ್ಸ್ ಸರ್ಕಾರ ವಜಾಗೊಳಿಸಿದೆ. ಭಾರತವು ಇಂದು ದ್ವೀಪ ರಾಷ್ಟ್ರದೊಂದಿಗೆ ವಿಷಯವನ್ನು ಪ್ರಸ್ತಾಪಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. 

ಮಾಲ್ಡೀವ್ಸ್‌ನ ಯುವ ಸಬಲೀಕರಣದ ಉಪ ಸಚಿವೆಯಾಗಿದ್ದ ಮರಿಯಮ್ ಶಿಯುನಾ ಎಕ್ಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ವಿದೂಷಕ ಮತ್ತು ಸೂತ್ರದ ಕೈಗೊಂಬೆ ಎಂದು ಕರೆದಿದ್ದರು. ಹಲವಾರು ಭಾರತೀಯರು ಕಡಲತೀರಗಳಿಗೆ ಹೆಸರುವಾಸಿಯಾದ ದ್ವೀಪ ರಾಷ್ಟ್ರಕ್ಕೆ ತಮ್ಮ ನಿಗದಿತ ಪ್ರವಾಸವನ್ನು ರದ್ದುಗೊಳಿಸಿದ್ದಾರೆ ಎಂದು ಸ್ಕ್ರೀನ್‌ಶಾಟ್‌ ಹಂಚಿಕೊಂಡಿದ್ದರು ಹಾಗೂ ಇದು ಎಕ್ಸ್‌ನಲ್ಲಿ ಟ್ರೆಂಡ್‌ ಆಗಿತ್ತು. 

ನೆರೆಯ ಭಾರತವನ್ನು ಅವಮಾನಿಸುವ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ಪೋಸ್ಟ್‌ಗಳಿಗೆ ಸಂಬಂಧಿಸಿದಂತೆ ಭಾರತ ಸರ್ಕಾರದ ನಿಲುವಿನ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಇಂದು ಹೇಳಿಕೆಯನ್ನು ನೀಡಿದೆ ಎಂದು ಮಾಲ್ಡೀವ್ಸ್ ಸರ್ಕಾರ ಹೇಳಿದೆ. 

ಸ್ಥಳೀಯ ಮಾಧ್ಯಮಗಳ ಪ್ರಕಾರ, ಸಚಿವರಾಗಿದ್ದ ಮರಿಯಮ್ ಶಿಯುನಾ, ಮಲ್ಶಾ ಮತ್ತು ಹಸನ್ ಜಿಹಾನ್ ಅವರನ್ನು ವಜಾಗೊಳಿಸಲಾಗಿದೆ. ಭಾರತದ ವಿರುದ್ಧ ಹಾಗೂ ಮೋದಿ ವಿರುದ್ಧದ ಟೀಕೆಯನ್ನು ಅಲ್ಲಿನ ವಿರೋಧ ಪಕ್ಷದ ನಾಯಕರು ಹಾಗೂ ಮಾಜಿ ಅಧ್ಯಕ್ಷ ಟೀಕೆ ಮಾಡಿದ್ದರು. ಬಳಿಕ, ಇದಕ್ಕೆ ಸ್ಪಷ್ಟನೆ ನೀಡಿದ ಮಾಲ್ಡೀವ್ಸ್‌ ಸರ್ಕಾರ, ವಿದೇಶಿ ನಾಯಕರು ಮತ್ತು ಉನ್ನತ ಶ್ರೇಣಿಯ ವ್ಯಕ್ತಿಗಳ ವಿರುದ್ಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅವಹೇಳನಕಾರಿ ಹೇಳಿಕೆಗಳ ಬಗ್ಗೆ ಮಾಲ್ಡೀವ್ಸ್ ಸರ್ಕಾರಕ್ಕೆ ತಿಳಿದಿದೆ. ಈ ಅಭಿಪ್ರಾಯಗಳು ವೈಯಕ್ತಿಕ ಮತ್ತು ಮಾಲ್ಡೀವ್ಸ್ ಸರ್ಕಾರದ ಅಭಿಪ್ರಾಯಗಳನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಳಿತ್ತು.