ಚೀನಾದಲ್ಲಿ ಕೊರೊನಾ ಸ್ಪೋಟ-ಕ್ಸಿಯಾನ್ ನಗರ ಸಂಪೂರ್ಣ ಲಾಕ್ ಡೌನ್

ಚೀನಾದಲ್ಲಿ ಕೊರೊನಾ ಸ್ಪೋಟ-ಕ್ಸಿಯಾನ್ ನಗರ ಸಂಪೂರ್ಣ ಲಾಕ್ ಡೌನ್

ಬೀಜಿಂಗ್:ಚೀನಾದಲ್ಲಿ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ.ಎರಡು ವರ್ಷದ ಹಿಂದೆ ಸ್ಪೋಟಗೊಂಡಿದ್ದ ಕೊರೊನಾ ಇಲ್ಲಿ ಮತ್ತೆ ಜನರನ್ನ ಕಾಡುತ್ತಿದೆ. ಇಲ್ಲಿವರೆಗೂ ಮಾಡದೇ ಇರೋ ಒಂದು ಅತಿ ದೊಡ್ಡ ಲಾಕ್ ಡೌನ್ ಅನ್ನ ಇಲ್ಲಿಯ ಪಶ್ಚಿಮದ ಕ್ಸಿಯಾನ್ ಪ್ರದೇಶನದಲ್ಲಿ ಮಾಡಲಾಗಿದೆ. ಬನ್ನಿ, ಹೇಳ್ತೀವಿ. ಇಲ್ಲಿಯ ಕ್ಸಿಯಾನ್ ನಗರದಲ್ಲಿ ಕೊರೊನಾ ಸ್ಪೋಟಗೊಂಡಿದೆ. ಇದನ್ನ ತಡೆಯಲು ಚೀನಾ ಸರ್ಕಾರ ಗುರುವಾರವೇ ಲಾಕ್ ಡೌನ್ ಮುಂದುವರೆಸಿದೆ. ಇಲ್ಲಿ 1.3 ಕೋಟಿಯೆಷ್ಟು ಜನಕ್ಕೆ ಮನೆಯಲ್ಲಿಯೇ ಇರುವಂತೆ ಆದೇಶ ನೀಡಲಾಗಿದೆ. ಅನಗತ್ಯ ಪ್ರವಾಸವನ್ನ ಮಾಡದಂತೆ ಇಲ್ಲಿಯ ಜನಕ್ಕೆ ತಿಳಿಸಲಾಗಿದೆ.ಹೊರಗಿನಿಂದ ಅಗತ್ಯ ವಸ್ತುಗಳನ್ನ ತರೋಕೆ ಮನೆಯ ಒಬ್ಬ ಸದಸ್ಯನನ್ನ ನಿಯೋಜಿಸಲು ಈಗಾಗಲೇ ಅಧಿಕಾರಿಗಳು ತಿಳಿಸಿದ್ದಾರೆ. ಬ್ರಿಟನ್‌ನಲ್ಲಿ ಕೊರೊನಾ ಆಂತಕ ಮುಂದುವರೆದಿದೆ. ಉಳಿದಂತೆ ಚೀನಾದ ಕ್ಸಿಯಾನ್ ನಗರದ ಲಾಕ್ ಡೌನ್ ಇಲ್ಲಿವರೆಗಿನ ಅತಿ ದೊಡ್ಡ ಲಾಕ್ ಅಂತಲೂ ಹೇಳಲಾಗುತ್ತಿದೆ.