"ಬಸ್ ಗಳಲ್ಲಿ ಕಂಡಕ್ಟರ್ 10 ರೂಪಾಯಿ ನಾಣ್ಯ ತೆಗೆದುಕೊಳ್ಳಲೇ ಬೇಕು"- ಸಾರಿಗೆ ಇಲಾಖೆ ಆದೇಶ

ಬೆಂಗಳೂರು: ರಾಜ್ಯದ ಬಸ್ ಕಂಡಕ್ಟರ್ ಗಳಿಗೆ ಸಾರಿಗೆ ಇಲಾಖೆ ಮಹತ್ವದ ಸೂಚನೆ ನೀಡಿದೆ. ಅದೇನೆಂದರೆ ಇಷ್ಟು ದಿನ ಪ್ರಯಾಣಿಕರು 10 ರೂಪಾಯಿ ನಾಣ್ಯಗಳನ್ನು ಕೊಟ್ಟರೆ ಕಂಡಕ್ಟರ್ ಗಳು ತೆಗೆದುಕೊಳ್ಳುತ್ತಿರಲಿಲ್ಲ! ಈ ಕುರಿತು ಕೆಎಸ್ ಆರ್ ಟಿಸಿ, ಬಿಎಂಟಿಸಿ, ವಾಯುವ್ಯ ಸಾರಿಗೆ ಮತ್ತು ಈಶಾನ್ಯ ಸಾರಿಗೆ ನಿಗಮಕ್ಕೆ ಸಾರಿಗೆ ಇಲಾಖೆ ಪತ್ರ ಬರೆದಿದೆ. ಇದರಲ್ಲಿ ರಾಜ್ಯದ ಎಲ್ಲ ಸಾರಿಗೆ ಬಸ್ ಗಳಲ್ಲಿ ಪ್ರಯಾಣಿಕರು 10 ರೂಪಾಯಿ ನಾಣ್ಯಗಳನ್ನು ನೀಡಿದರೆ ನಿರಾಕರಿಸಬಾರದು ಎಂದು ಖಡಕ್ ಆದೇಶ ನೀಡಲಾಗಿದೆ.
ಬಸ್ ಯಾನದ ಸಂದರ್ಭ ಪ್ರಯಾಣಿಕರು 10 ರೂಪಾಯಿ ನಾಣ್ಯ ಕೊಟ್ಟರೆ ಪಡೆಯಲೇ ಬೇಕು. ಒಂದು ವೇಳೆ ನಿರಾಕರಿಸಿದರೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಇಲಾಖೆ ಎಚ್ಚರಿಕೆ ಕೊಟ್ಟಿದೆ.