ಮಲೇಷ್ಯಾದಲ್ಲಿ ಭೂಕುಸಿತ್ಕೆ 8 ಮಂದಿ ಬಲಿ, 50ಕ್ಕೂ ಅಧಿಕ ಮಂದಿ ನಾಪತ್ತೆ

ಮಲೇಷ್ಯಾದ ಕೌಲಾಲಂಪುರದ ಹೊರವಲಯದಲ್ಲಿರುವ ಸೆಲಂಗೋರ್ ರಾಜ್ಯದಲ್ಲಿ ಭೂಕುಸಿತ ಸಂಭವಿಸಿದ್ದು, 8 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಮೂವರು ಗಾಯಗೊಂಡಿದ್ದು, 50ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿರಬಹುದು ಎಂದು ಅಂದಾಜಿಸಲಾಗಿದೆ.
ರಕ್ಷಣಾ ಕಾರ್ಯಾಚರಣೆಯನ್ನು ಯುದ್ಧಾಧಾರಿತವಾಗಿ ಆರಂಭಿಸಲಾಗಿದೆ. ಶೀಘ್ರ ಜನರನ್ನು ಹೊರತರುವ ಕೆಲಸವೂ ನಡೆಯುತ್ತಿದೆ. ಇದುವರೆಗೆ 31 ಮಂದಿಯನ್ನು ಶಿಬಿರ ಸ್ಥಳದಿಂದ ರಕ್ಷಿಸಲಾಗಿದೆ ಎಂದು ಅಗ್ನಿಶಾಮಕ ಇಲಾಖೆಯ ನಿರ್ದೇಶಕ ನೊರಾಜಮ್ ಖಮೀಸ್ ತಿಳಿಸಿದ್ದಾರೆ.
ಕ್ಯಾಂಪ್‌ಸೈಟ್‌ನಿಂದ ಸುಮಾರು 30 ಮೀಟರ್ ಎತ್ತರದಿಂದ ಭೂಕುಸಿತ ಸಂಭವಿಸಿದೆ. ಇದರಿಂದ ಸುಮಾರು ಒಂದು ಎಕರೆ ಪ್ರದೇಶ ಹಾನಿಯಾಗಿದೆ.