ಸಭಾಪತಿ ಸ್ಥಾನಕ್ಕೆ ತನ್ನನ್ನೇ ಅಧಿಕೃತ ಅಭ್ಯರ್ಥಿ ಎಂದು ಬಿಜೆಪಿ ತೀರ್ಮಾನಿಸಿದೆ, ಘೋಷಣೆಯಷ್ಟೇ ಬಾಕಿಯಿದೆ: ಬಸವರಾಜ ಹೊರಟ್ಟಿ

ಧಾರವಾಡ: ಸಭಾಪತಿ ಸ್ಥಾನಕ್ಕೆ ತನ್ನನ್ನು ಅಧಿಕೃತ ಅಭ್ಯರ್ಥಿ ಎಂದು ಬಿಜೆಪಿ ನಿರ್ಧರಿಸಿದ್ದು ಶೀಘ್ರವೇ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ವಿಧಾನ ಪರಿಷತ್ ನ ಹಿರಿಯ ಸದಸ್ಯ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನ ಪರಿಷತ್ ಸಭಾಪತಿ ಸ್ಥಾನದ ಅಭ್ಯರ್ಥಿ ವಿಚಾರವಾಗಿ ಭಾರತೀಯ ಜನತಾ ಪಕ್ಷದ ನಾಯಕ ರವಿಕುಮಾರ್ ನನಗೆ ಪೋನ್ ಕರೆ ಮಾಡಿದ್ದು ತಾವೇ ಅಭ್ಯರ್ಥಿ ಎಂದು ಹೇಳಿದ್ದಾರೆ. ಅವರಿಗೆ ನಾನು ಧನ್ಯವಾದ ಹೇಳುತ್ತೇನೆ. ಅಧಿಕೃತವಾಗಿ ಇವತ್ತು ಅನೌನ್ಸ್ ಮಾಡುತ್ತೇವೆ ಸಹ ಎಂದಿದ್ದಾರೆ ಎಂದರು.