ಇನ್ನು ಮುಂದೆ ನಿಮ್ಮ ಅಂಚೆ ಪತ್ರಗಳನ್ನು ಸರಕಾರಿ ಅಧಿಕಾರಿಗಳೂ ಓದಬಹುದು!

ನವದೆಹಲಿ: ರಾಷ್ಟ್ರದ ಭದ್ರತೆಯ ದೃಷ್ಟಿಯಿಂದ ಅಂಚೆ ಕಚೇರಿಗೆ ಬರುವ ಯಾವುದೇ ಪತ್ರಗಳನ್ನು ಸರ್ಕಾರಿ ಅಧಿಕಾರಿಗಳು ತೆರೆದು ನೋಡಬಹುದು ಅಥವಾ ಸೀಜ್ ಮಾಡುವುದಕ್ಕೆ ಅಧಿಕಾರ ನೀಡುವ ಮಸೂದೆಗೆ ಲೋಕಸಭೆ ಒಪ್ಪಿಗೆ ನೀಡಿದೆ.
ಪತ್ರಗಳು ಮಾತ್ರವಲ್ಲ, ಖಾಸಗಿ ಕೊರಿಯರ್ ಗಳನ್ನೂ ಈ ಮಸೂದೆ ವ್ಯಾಪ್ತಿಗೆ ತರಲಾಗಿದೆ. ಅದರಂತೆ ಕೊರಿಯರ್ ಕಚೇರಿ ಅಥವಾ ಸಂಗ್ರಹ ಕೇಂದ್ರಕ್ಕೆ ಬರುವ ಸಂಶಯಾಸ್ಪದ ಪತ್ರ ಹಾಗೂ ಯಾವುದೇ ವಸ್ತುಗಳನ್ನು ಓಪನ್ ಮಾಡಿ ಕಾನೂನು ಬಾಹಿರವಾಗಿದ್ದರೆ ಮುಟ್ಟುಗೋಲು ಹಾಕುವ ಅಧಿಕಾರ ಇದೀಗ ಸರಕಾರಕ್ಕೆ ಲಭ್ಯವಾಗಿದೆ. ರಾಜ್ಯ ಸಭೆಯಲ್ಲಿ
ಈ ಮಸೂದೆ ಡಿಸೆಂಬರ್ 4ರಂದೇ ಅಂಗೀಕೃತಗೊಂಡಿದೆ.