ಬೆಳಗಾವಿ: ರಾಯಣ್ಣನ ಪ್ರತಿಮೆ ಭಗ್ನ-144 ಸೆಕ್ಷನ್ ಜಾರಿ

ಬೆಳಗಾವಿ: ರಾಯಣ್ಣನ ಪ್ರತಿಮೆ ಭಗ್ನ-144 ಸೆಕ್ಷನ್ ಜಾರಿ

ಬೆಳಗಾವಿ: ಎಂಇಎಸ್ ಪುಂಡಾಡಿಕೆ ಇಲ್ಲಿ ದಿನೇ ದಿನೇ ಹೆಚ್ಚಾಗಿದೆ.ಈಗ ನೋಡಿದ್ರೆ ರಾಯಣ್ಣನ ಪ್ರತಿಮೆಯನ್ನ ಭಗ್ನಗೊಳಿಸಿ ಪುಂಡಾಟಿಕೆ ಮರೆದಿದ್ದಾರೆ. ಅದಕ್ಕೇನೆ ಇಲ್ಲಿ ಈಗ 144 ನೇ ಕಲಂ ಜಾರಿ ಆಗಿದೆ. ಕನ್ನಡ ಧ್ವಜವನ್ನ ಸುಟ್ಟು ಪುಂಡಾಟಿಕೆ ಮರೆದಿದ್ದ ದುಷ್ಕರ್ಮಿಗಳು. ಆದರೆ ಈಗ ರಾತ್ರೋ ರಾತ್ರಿ ನಗರದ ರಾಯಣ್ಣನ ಪುತ್ಥಳಿಯ ಕೈ ಕತ್ತರಿಸಿ ವಿಕೃತಿ ಮೆರೆದಿದ್ದಾರೆ. ಇದರಿಂದ ಬೆಳಗಾವಿಯಲ್ಲಿ ಬಿಗುವಿನ ವಾತಾವರಣ ಇದೆ. ನಿನ್ನೆ ನೋಡಿದ್ರೆ ಶಿವಾಜಿ ಪ್ರತಿಮೆಗೆ ಮಸಿ ಬಳೆದು ಪುಂಡಾಟಿಕೆ ಮರೆದಿದ್ದರು. ಆದರೆ ರಾಯಣ್ಣ ಪ್ರತಿಮೆಯನ್ನ ಭಗ್ನಗೊಳಿಸಿ ವಿಕೃತಿ ಮರೆದಿದ್ದಾರೆ.