ಮಹಾರಾಷ್ಟ್ರದಲ್ಲಿ ಕೊರೊನಾ ಮರಣಮೃದಂಗ: IAS ಅಧಿಕಾರಿ ನೀಲಾ ಸತ್ಯನಾರಾಯಣ್ ವೈರಸ್ ಗೆ ಬಲಿ

ಮುಂಬೈ: ಮಹಾರಾಷ್ಟ್ರದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದೆ. ಕೊರೊನಾ ಮಹಾಮಾರಿಗೆ ರಾಜ್ಯದಲ್ಲಿ ಸೇವೆ ಸಲ್ಲಿಸಿದ್ದ IAS ಅಧಿಕಾರಿ ನೀಲಾ ಸತ್ಯನಾರಾಯಣ್ ಬಲಿಯಾಗಿದ್ದಾರೆ.
72 ವರ್ಷದ ನೀಲಾ ಸತ್ಯನಾರಾಯಣ್ ಮುಂಬೈನ ಸೆವೆನ್ ಹಿಲ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ರಾಜ್ಯದ ಪ್ರಪ್ರಥಮ ಮಹಿಳಾ ಮುಖ್ಯ ಚುನಾವಣಾ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. IAS ಅಧಿಕಾರಿಯಾಗಿರುವ ಜೊತೆಗೆ ಖ್ಯಾತ ಕವಯಿತ್ರಿಯೂ ಆಗಿದ್ದರು.
ಅನೇಕ ಸಿನಿಮಾಗಳಿಗೂ ರಾಗ ಸಂಯೋಜನೆ ಮಾಡಿದ್ದ ನೀಲಾ ಸತ್ಯನಾರಾಯಣ್ ಮಹಾರಾಷ್ಟ್ರದಲ್ಲಿ ಸೋಂಕಿನಿಂದ ಮೃತಪಟ್ಟಿರುವ ಮೊದಲ IAS ಅಧಿಕಾರಿಯಾಗಿದ್ದಾರೆ.