ರಷ್ಯಾದಲ್ಲಿ ಪುಟಿನ್ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ: ಅಧಿಕಾರಿಗಳ ಭವಿಷ್ಯ

ರಷ್ಯಾದಲ್ಲಿ ಪುಟಿನ್ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ: ಅಧಿಕಾರಿಗಳ ಭವಿಷ್ಯ

ಮಾಸ್ಕೊ: 2024ರಲ್ಲಿ ನಡೆಯಲಿರುವ ರಷ್ಯಾ ರಾಷ್ಟ್ರೀಯ ಸಂಸತ್ ಚುನಾವಣೆಯಲ್ಲಿ ಪುಟಿನ್‌ರ ಪಕ್ಷ 450ರಲ್ಲಿ 324 ಸ್ಥಾನಗಳನ್ನು ಗೆದ್ದು ಬಹುಮತ ಸಾಧಿಸಲಿದೆ. ಸರ್ಕಾರ ರಚಿಸಲು 324 ಸಂಖ್ಯೆ ಸಾಕು ಎಂದು ಅಧಿಕಾರಿಗಳು ಹೇಳಿದ್ದಾರೆ. ಇತ್ತೀಚಿಗಷ್ಟೆ ಕೆಳಮನೆಯಲ್ಲಿ ವಿಶ್ವಾಸಮತ ಸಾಬೀತು ಪಡಿಸಿ ಪುತಿನ್ ರ ಪಕ್ಷ ಮತ್ತೆ ಜಯಶಾಲಿಯಾಗಿ ಹೊಮ್ಮಿತ್ತು. 2024ರಲ್ಲಿ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರ ಅವಧಿ ಕೊನೆಗೊಳ್ಳುತ್ತದೆ. ಭಾನುವಾರ ಕೊನೆಗೊಂಡ ಕೆಳಮನೆ ಸಂಸದೀಯ ಚುನಾವಣೆಯಲ್ಲಿ ಪುತಿನ್ ಅಕ್ರಮ ಎಸಗಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. ವಿರೋಧ ಪಕ್ಷದ ಮುಖಂಡರನ್ನು ಚುನಾವಣೆಗೂ ಮುನ್ನ ಬಂಧಿಸಲಾಗಿತ್ತು. ಪುತಿನ್ ಅವರ ಪ್ರತೀಕಾರದ ಭಯದಿಂದ ಹಲವು ಮಂದಿ ವಿರೋಧ ಪಕ್ಷ ಮುಖಂಡರು ವಿದೇಶಕ್ಕೆ ಪಲಾಯನ ಮಾಡಿದ್ದರು.