ಅಯೋಧ್ಯೆಯಲ್ಲಿ ಮಕ್ಕಳೊಂದಿಗೆ ಮೋದಿ ಸೆಲ್ಫಿ, ಆಟೋಗ್ರಾಫ್ ನೀಡಿದ ಪ್ರಧಾನಿ

ಅಯೋಧ್ಯೆ : ದೆಹಲಿಯಿಂದ ವಿಶೇಷ ವಿಮಾನದಲ್ಲಿ ಅಯೋಧ್ಯೆಗೆ ಬಂದ ಮೋದಿಯನ್ನ ವಿಮಾನ ನಿಲ್ದಾಣದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಅವರು ಶಾಲು ಹೊದಿಸಿ ಬರಮಾಡಿಕೊಂಡರು. ಇನ್ನು ರಾಮನೂರಿಗೆ ಭೇಟಿ ಕೊಟ್ಟ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಕಾರ್ಯಕ್ರಮಗಳನ್ನು ಉದ್ಘಾಟಿಸಿದ್ದಾರೆ. ಈ ವೇಳೆ ಪ್ರಧಾನಿಯವರು ಇಬ್ಬರು ಮಕ್ಕಳನ್ನು ಭೇಟಿಯಾಗಿ ಅವರೊಂದಿಗೆ ಸೆಲ್ಫಿ ತೆಗೆದುಕೊಂಡರು. ಬಳಿಕ ಅವರಿಗೆ ಆಟೋಗ್ರಾಫ್ ಕೂಡ ನೀಡಿದ್ದಾರೆ.
ಈ ವೇಳೆ ಬಾಲಕನೊಬ್ಬ ತಾನು ಬಿಡಿಸಿದ ರಾಮಮಂದಿರದ ಚಿತ್ರವನ್ನು ಪ್ರಧಾನಿಯವರಿಗೆ ತೋರಿಸಿದ್ದು, ಮೋದಿಯವರು ಹರ್ಷ ವ್ಯಕ್ತಪಡಿಸಿದ್ದಾರೆ. ಇಂದು ಬೆಳಗ್ಗೆ 10.45ರ ಸುಮಾರಿಗೆ ಅಯೋಧ್ಯೆಗೆ ಆಗಮಿಸಿರುವ ಪ್ರಧಾನಿ ಮೋದಿಯವರು ಮೊದಲು ರೋಡ್ ಶೋ ನಡೆಸಿದರು. ಬಳಿಕ ರೈಲ್ವೆ ನಿಲ್ದಾಣ ಉದ್ಘಾಟನೆ ಮಾಡಿದರು. ಈ ವೇಳೆ ಕರ್ನಾಟಕದ 3 ರೈಲು ಸೇರಿ 8 ಹೊಸ ರೈಲುಗಳಿಗೆ ಮೋದಿ ಹಸಿರು ನಿಶಾನೆ ತೋರಿದರು. ಅದಾದ ಬಳಿಕ ವಿಮಾನ ನಿಲ್ದಾಣ ಉದ್ಘಾಟಿಸಿದರು.